ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟದಲ್ಲಿ ಬ್ಯಾಂಕ್‌ನ ವಿದೇಶಿ ಶಾಖೆ

Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: 2016–17ನೇ ಆರ್ಥಿಕ ವರ್ಷದಲ್ಲಿ, ವಿದೇಶದಲ್ಲಿ ಇರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಶಾಖೆಗಳಲ್ಲಿ  ಶೇ 25 ರಷ್ಟು ನಷ್ಟ ಅನುಭವಿಸಿವೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ ಶುಕ್ಲಾ ತಿಳಿಸಿದ್ದಾರೆ.

ನಷ್ಟದಲ್ಲಿರುವ ಶಾಖೆಗಳಲ್ಲಿ ಎಸ್‌ಬಿಐ ಮುಂಚೂಣಿಯಲ್ಲಿದೆ. ಅದರ 9 ಶಾಖೆಗಳು ನಷ್ಟದಲ್ಲಿ ನಡೆಯುತ್ತಿವೆ. ಬ್ಯಾಂಕ್‌ ಆಫ್‌ ಇಂಡಿಯಾ (8), ಬ್ಯಾಂಕ್‌ ಆಫ್‌ ಬರೋಡಾ (7) ನಂತರದ ಸ್ಥಾನದಲ್ಲಿವೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೂರ್ಣಾವಧಿಯ ನಿರ್ದೇಶಕರು ಮತ್ತು ಹಿರಿಯ ವ್ಯವಸ್ಥಾಪಕರು ನೀಡಿರುವ ಶಿಫಾರಸಿನ ಮೇರೆಗೆ ನಷ್ಟದಲ್ಲಿರುವ ಶಾಖೆಗಳ ಪುನಶ್ಚೇತನಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ’ ಎಂದು ತಿಳಿಸಿದ್ದಾರೆ.

ಹೆಚ್ಚುತ್ತಿದೆ ಸುಸ್ತಿದಾರರ ಸಂಖ್ಯೆ ಉದ್ದೇಶಪೂರ್ವಕ ಸುಸ್ತಿದಾರರ ಸಂಖ್ಯೆ ಹೆಚ್ಚಾಗುತ್ತಿದೆ. 2014ರ ಮಾರ್ಚ್‌ 31 ರಲ್ಲಿ ಇವರ ಸಂಖ್ಯೆ 6,336 ಇತ್ತು. ಅದು 2017ರ ಡಿಸೆಂಬರ್ 31ರ ಅಂತ್ಯಕ್ಕೆ 9,063ಕ್ಕೆ ಏರಿಕೆ ಕಂಡಿದೆ.

ಆರ್‌ಬಿಐ ಸೂಚನೆಯಂತೆ, ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಉದ್ದೇಶಪೂರ್ವಕ ಸುಸ್ತಿದಾರರಿಗೆ ಹೆಚ್ಚುವರಿಯಾಗಿ ಯಾವುದೇ ಸಾಲ ನೀಡುತ್ತಿಲ್ಲ. ಇವರ ಸಂಖ್ಯೆ ತಗ್ಗಿಸಲು ಹಲವು ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ‘ಇಂತಹ ಕಂಪನಿಗಳು, ಅದರ ಪ್ರವರ್ತಕರು, ನಿರ್ದೇಶಕರು ಮಾರುಕಟ್ಟೆ ಪ್ರವೇಶಿಸುವುದನ್ನು ‘ಸೆಬಿ’ ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT