ಫುಟ್‌ಬಾಲ್‌: ಭಾರತ–ಕೊರಿಯಾ ಪಂದ್ಯ ಡ್ರಾ

7

ಫುಟ್‌ಬಾಲ್‌: ಭಾರತ–ಕೊರಿಯಾ ಪಂದ್ಯ ಡ್ರಾ

Published:
Updated:

ನವದೆಹಲಿ: 16 ವರ್ಷದೊಳಗಿನವರ ನಾಲ್ಕು ರಾಷ್ಟ್ರಗಳ ಹುವಾ ಶಾನ್‌ ಕಪ್‌ ಸಿಎಫ್‌ಎ ಅಂತರರಾಷ್ಟ್ರೀಯ ಯೂತ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಡಿಪಿಆರ್‌ ಕೊರಿಯಾ ಎದುರಿನ ಪಂದ್ಯವನ್ನು ಭಾರತ ತಂಡ ಡ್ರಾ ಮಾಡಿಕೊಂಡಿದೆ. 

ಆರಂಭದಿಂದಲೂ ಜಿದ್ದಾಜಿದ್ದಿನ ಹೋರಾಟಕ್ಕೆ ಪಂದ್ಯ ಸಾಕ್ಷಿಯಾಯಿತು. 13ನೇ ನಿಮಿಷದಲ್ಲಿ ಭಾರತದ ಗಿವ್ಸನ್ ಅವರಿಗೆ ಸಿಕ್ಕ ಅವಕಾಶವು ವಿಫಲವಾಯಿತು. ಅವರು ಒದ್ದ ಚೆಂಡು ಗುರಿ ಸೇರಲಿಲ್ಲ. ನಂತರ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಡಿಪಿಆರ್‌ ಕೊರಿಯಾ ತಂಡವು ಭಾರತದ ಆಟಗಾರರನ್ನು ಕಟ್ಟಿಹಾಕಿತು. ಆದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 

ಪಂದ್ಯದ 75ನೇ ನಿಮಿಷದಲ್ಲಿ ಕೊರಿಯಾ ತಂಡವು ಖಾತೆ ತೆರೆಯಿತು. ಆದರೆ ಕೇವಲ ಎರಡು ನಿಮಿಷಗಳ ನಂತರ ಭಾರತ ತಂಡಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ವಿಕ್ರಮ್‌ ಪ್ರತಾಪ್‌ ಸಿಂಗ್‌ ಅವರು ಇದನ್ನು ಸದುಪಯೋಗಪಡಿಸಿಕೊಂಡು ತಂಡ ಸಮಬಲ ಸಾಧಿಸಲು ನೆರವಾದರು. 

ಹಿಂದಿನ ಎರಡು ಪಂದ್ಯಗಳಲ್ಲೂ ಭಾರತ ತಂಡವು ಕ್ರಮವಾಗಿ ಚೀನಾ ಹಾಗೂ ಥಾಯ್ಲೆಂಡ್‌ ವಿರುದ್ಧ ಮಣಿದಿತ್ತು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !