ಪಥುಮ್ ಥಾನಿ (ಥಾಯ್ಲೆಂಡ್), (ಪಿಟಿಐ): ಭಾರತ ಮಹಿಳೆಯರ ತಂಡ, ಎಎಫ್ಸಿ 20 ವರ್ಷದೊಳಗಿನವರ ಮಹಿಳಾ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಬುಧವಾರ 3–1 ಗೋಲುಗಳಿಂದ ತೈವಾನ್ ತಂಡವನ್ನು ಸೋಲಿಸಿತು. ಇದರಿಂದ ನಾಕೌಟ್ ತಲುಪುವ ಭಾರತದ ಆಸೆ ಜೀವಂತವಾಗಿ ಉಳಿದಿದೆ.

ಭಾರತದ ಪರ ಭೂಮಿಕಾ ದೇವಿ ಖುಮುಕ್ಚಾಮ್ (26ನೇ ನಿಮಿಷ), ಶಿವಾನಿ ದೇವಿ ನೊಂಗ್ಮೀಕಾಪಾಮ್ (32 ಮತ್ತು 87ನೇ ನಿಮಿಷ) ಅವರು ಗೋಲು ಗಳಿಸಿದರು. ತೈವಾನ್ ಪರ ಸಬ್ಸ್ಟಿಟ್ಯೂಟ್ ಆಟಗಾರ್ತಿ ಕಾವೊ ಸಿನ್ (90+3) ಅವರು ಗೋಲು ಗಳಿಸಿದರು.

ಇದು ಭಾರತ ತಂಡಕ್ಕೆ ಎಎಫ್ಸಿ ಮಹಿಳಾ ಏಷ್ಯನ್ ಕಪ್ ಟೂರ್ನಿಯಲ್ಲಿ 2004ರ ನಂತರ ದಕ್ಕಿದ ಮೊದಲ ಗೆಲುವಾಗಿದೆ. ಭಾರತ ಸಿ ಗುಂಪಿನಲ್ಲಿ 3 ಪಂದ್ಯಗಳಿಂದ 3 ಪಾಯಿಂಟ್ಸ್ ಗಳಿಸಿದೆ. ಆದರೆ ಭಾರತ ನಾಕೌಟ್ ಆಸೆ ಜೋರ್ಡಾನ್– ಉಜ್ಬೇಕಿಸ್ತಾನ ನಡುವಣ ‘ಬಿ’ ಪಂದ್ಯದ ಭವಿಷ್ಯ ಅವಲಂಬಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.