ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಮೋಹನ್ ಬಾಗನ್ ಹಾಗೂ ಆತಿಥೇಯ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡಗಳು ಶನಿವಾರ ನಡೆದ ಪಂದ್ಯದಲ್ಲಿ ಡ್ರಾ ಸಾಧಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರೂ ಜಿದ್ದಾಜಿದ್ದಿಯ ಪೈಪೋಟಿ ನಡೆಸಿದರು. ಆದರೆ ಪಂದ್ಯವು ಒಂದೂ ಗೋಲು ಇಲ್ಲದೇ ಡ್ರಾ ಆಯಿತು.

ಬಾಗನ್ ತಂಡವು ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ 4ರಲ್ಲಿ ಜಯಿಸಿ, 1ರಲ್ಲಿ ಡ್ರಾ ಮಾಡಿಕೊಂಡಿದೆ. 13 ಅಂಕಗಳನ್ನು ಗಳಿಸಿದೆ. ಬಿಎಫ್ಸಿ ತಂಡವು ಐದು ಪಂದ್ಯಗಳಲ್ಲಿ ಎರಡು ಗೆದ್ದು, ಎರಡರಲ್ಲಿ ಡ್ರಾ ಮತ್ತು ಒಂದರಲ್ಲಿ ಸೋತಿದೆ. ಒಟ್ಟು 8 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ ಚೆಂಡು ಬಾಗನ್ ತಂಡದ ನಿಯಂತ್ರಣದಲ್ಲಿಯೇ ಹೆಚ್ಚು ಹೊತ್ತು ಇತ್ತು. ಆದರೆ ಬಿಎಫ್ಸಿ ತಂಡವು ಐದು ಸಲ ಗುರಿಯತ್ತ ಚೆಂಡನ್ನು ಕಿಕ್ ಮಾಡಿದರೂ ಫಲ ಸಿಗಲಿಲ್ಲ. ಬಿಎಫ್ಸಿ ತಂಡವು 15 ಹಾಗೂ ಬಾಗನ್ 10 ಫೌಲ್ ಮಾಡಿತು.

ಉಭಯ ತಂಡಗಳಿಗೂ ಸೇರಿ ಒಟ್ಟು 7 ಕಾರ್ನರ್ಗಳು ಲಭಿಸಿದ್ದವು. ಆದರೆ ಇಬ್ಬರೂ ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ಡ್ರಾದಲ್ಲಿ ಕೇರಳ

ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯವೂ ಡ್ರಾ ಆಯಿತು. ಈಸ್ಟ್ ಬೆಂಗಾಲ್ ಮತ್ತು ಕೇರಳ ಬ್ಲಾಸ್ಟರ್ಸ್ 1–1ರಿಂದ ಡ್ರಾ ಸಾಧಿಸಿದವು.

10ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಈಸ್ಟ್ ಬೆಂಗಾಲ್ ತಂಡದ ಯೂಸೂಫ್ ಇಝೇಜಾರಿ ಗೋಲು ಗಳಿಸಿದರು.

ಅಲ್ಲಿಂದ ಬೆಂಗಾಲ್ ತಂಡವು ಉತ್ತಮವಾಗಿ ಆಡಿ ಎದುರಾಳಿ ಗಳು ಗಳಿಸದಂತೆ ತಡೆದಿತ್ತು. ಆದರೆ ಇಂಜುರಿ ಸಮಯದಲ್ಲಿ ಕೇರಳದ ಮೊಹಮ್ಮದ್ ಅಜ್ಸಾಲ್ (90+2ನಿ) ಅವರು ಗೋಲು ಹೊಡೆದು ತಮ್ಮ ತಂಡದ ಸೋಲು ತಪ್ಪಿಸಿದರು. ಪಂದ್ಯ ಡ್ರಾ ಆಯಿತು.

ಈಸ್ಟ್ ಬೆಂಗಾಲ್ ತಂಡವು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೇರಳ 12ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.