ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಕೇರಳ–ನಾರ್ತ್‌ ಈಸ್ಟ್ ಪಂದ್ಯ ಡ್ರಾ

Last Updated 26 ನವೆಂಬರ್ 2020, 16:31 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್, ಗೋವಾ: ಆರಂಭದಲ್ಲೇ ಗಳಿಸಿದ ಗೋಲಿನ ಬಲದೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದ ಕೇರಳ ಬ್ಲಾಸ್ಟರ್ಸ್ ತಂಡ ಕೊನೆಯಲ್ಲಿ ಎಡವಿತು. ದ್ವಿತೀಯಾರ್ಧದಲ್ಲಿ ಗೋಲು ಗಳಿಸಿ ತಿರುಗೇಟು ನೀಡಿದ ನಾರ್ತ್‌ ಈಸ್ಟ್ ಯುನೈಟೆಡ್‌ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಕೇರಳ ಬ್ಲಾಸ್ಟರ್ಸ್ ಮತ್ತು ನಾರ್ತ್‌ ಈಸ್ಟ್ ಯುನೈಟೆಡ್ ನಡುವಿನ ಪಂದ್ಯ 2–2ರ ಡ್ರಾದಲ್ಲಿ ಮುಕ್ತಾಯಗೊಂಡಿತು. ಜಿದ್ದಾಜಿದ್ದಿಯ ಹೋರಾಟ ಕಂಡುಬಂದ ಪಂದ್ಯದ ಮೊದಲ ನಿಮಿಷದಲ್ಲೇ ಕೇರಳಕ್ಕೆ ಫ್ರೀ ಕಿಕ್ ಅವಕಾಶ ಲಭಿಸಿತ್ತು. ಆದರೆ ಫಲ ಕಾಣಲಿಲ್ಲ. ಐದನೇ ನಿಮಿಷದಲ್ಲಿ ಸತ್ಯಸೇನ್ ಅವರ ಉತ್ತಮ ಪಾಸ್‌ನಲ್ಲಿ ಗೋಲು ಗಳಿಸಿದ ಸರ್ಜಿಯೊ ಸಿಡೋಂಚಾ, ಕೇರಳಕ್ಕೆ ಮುನ್ನಡೆ ತಂದುಕೊಟ್ಟರು. 45ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಸುಲಭವಾಗಿ ಗುರಿ ಮುಟ್ಟಿಸಿದ ಗ್ಯಾರಿ ಹೂಪರ್, ಕೇರಳದ ಮುನ್ನಡೆ ಹೆಚ್ಚಿಸಿದರು.

ಆದರೆ ದ್ವಿತೀಯಾರ್ಧದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಿರುಗೇಟು ನೀಡಿತು. 51ನೇ ನಿಮಿಷದಲ್ಲಿ ಖ್ವೇಸಿ ಅಪ್ಪಯ್ಯ ಸೊಗಸಾದ ಗೋಲಿನೊಂದಿಗೆ ಭರವಸೆ ಮೂಡಿಸಿದರು. ಇಂಜುರಿ ಅವಧಿಯಲ್ಲಿ ಗುರ್ಜಿಂದರ್ ನೀಡಿದ ಕ್ರಾಸ್‌ನಲ್ಲಿ ಗೋಲು ಗಳಿಸಿದ ಸಿಲ್ಲಾ, ಕೇರಳಕ್ಕೆ ನಿರಾಸೆ ಮೂಡಿಸಿದರು.

ಬುಧವಾರ ನಿಧನರಾದ ಡಿಯೆಗೊ ಮರಡೋನಾ ಅವರಿಗೆ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಾಳೆಯ ಪಂದ್ಯ

ಈಸ್ಟ್ ಬೆಂಗಾಲ್–ಎಟಿಕೆ ಮೋಹನ್ ಬಾಗನ್

ಸ್ಥಳ: ತಿಲಕ್‌ ಮೈದಾನ್, ವಾಸ್ಕೊ

ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT