ಕೋಲ್ಕತ್ತ: ಹಾಲಿ ಚಾಂಪಿಯನ್ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡವು ಇಂಡಿಯನ್ ಸೂಪರ್ ಲೀಗ್ನ ಪಂದ್ಯದಲ್ಲಿ ಸೋಮವಾರ ಬೆಂಗಳೂರು ಎಫ್ಸಿ ತಂಡವನ್ನು ಎದುರಿಸಲಿದೆ.

17 ಪಂದ್ಯಗಳನ್ನು ಆಡಿರುವ ಬಾಗನ್ ತಂಡವು 11 ಪಂದ್ಯಗಳನ್ನು ಗೆದ್ದು 37 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಷ್ಟೇ ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡವು ಎಂಟು ಪಂದ್ಯಗಳನ್ನು ಗೆದ್ದು 28 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಗೋವಾ ಎಫ್ಸಿ (33) ಎರಡನೇ ಸ್ಥಾನ ಕಾಯ್ದುಕೊಂಡಿದೆ.

ಬಾಗನ್ ತಂಡವು ಉತ್ತಮ ಲಯದಲ್ಲಿದ್ದು, ತವರಿನಲ್ಲಿ ನಡೆದ ಕೊನೆಯ ಏಳು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅದಕ್ಕೂ ಹಿಂದಿನ ಐದು ಪಂದ್ಯಗಳ ಪೈಕಿ ಮೂರಲ್ಲಿ ಗೆದ್ದು, ಇನ್ನೆರಡಲ್ಲಿ ಡ್ರಾ ಸಾಧಿಸಿ ತವರಿನಲ್ಲಿ ಅಜೇಯವಾಗಿ ಉಳಿದಿದೆ.

ಬೆಂಗಳೂರು ತಂಡವು ಕಳೆದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತು, ಒಂದರಲ್ಲಿ ಡ್ರಾ ಸಾಧಿಸಿದೆ. ಋತುವಿನ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಬಾಗನ್ ವಿರುದ್ಧ 3–0 ಗೋಲುಗಳಿಂದ ಜಯ ಸಾಧಿಸಿದ್ದ ಸುನಿಲ್ ಚೆಟ್ರಿ ಬಳಗವು ಮತ್ತೆ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

ಪಂದ್ಯ ಆರಂಭ: ರಾತ್ರಿ: 7.30

ನೇರಪ್ರಸಾರ: ಸ್ಟೋರ್ಟ್ಸ್ 18, ಜಿಯೊ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.