ಇಂಡಿಯನ್‌ ಸೂಪರ್‌ ಲೀಗ್: ಮುಂಬೈ ಎಫ್‌ಸಿಗೆ ವಿಘ್ನೇಶ್‌

7

ಇಂಡಿಯನ್‌ ಸೂಪರ್‌ ಲೀಗ್: ಮುಂಬೈ ಎಫ್‌ಸಿಗೆ ವಿಘ್ನೇಶ್‌

Published:
Updated:

ಮುಂಬೈ: ಕರ್ನಾಟಕದ ವಿಘ್ನೇಶ್‌ ದಕ್ಷಿಣಮೂರ್ತಿ ಅವರು ಮುಂಬರುವ ಇಂಡಿಯನ್‌ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್‌ಸಿ ಪರ ಆಡಲಿದ್ದಾರೆ.

ಈ ಸಂಬಂಧ ಮುಂಬೈ ತಂಡ ಶನಿವಾರ ವಿಘ್ನೇಶ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರಿನ ವಿಘ್ನೇಶ್‌, ಓಜೋನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಢಾಕಾದಲ್ಲಿ ನಡೆದಿದ್ದ ಸ್ಯಾಫ್ ಸುಜುಕಿ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಅವರು 23 ವರ್ಷದೊಳಗಿನವರ ಭಾರತದ ತಂಡದಲ್ಲಿ ಆಡಿದ್ದರು.

‘ವಿಘ್ನೇಶ್‌ ಪ್ರತಿಭಾನ್ವಿತ ಆಟಗಾರ. ವಿವಿಧ ವಯೋಮಾನದ ಟೂರ್ನಿಗಳಲ್ಲಿ ಆಡಿ ಗಮನ ಸೆಳೆದಿದ್ದಾರೆ. ಹೀಗಾಗಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಮುಂಬೈ ಸಿಟಿ ಎಫ್‌ಸಿ ತಂಡದ ಸಿಇಒ ಇಂದ್ರಾನಿಲ್‌ ದಾಸ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !