ಫುಟ್‌ಬಾಲ್‌: ಸೆಮಿಗೆ ಭಾರತ ತಂಡ

4

ಫುಟ್‌ಬಾಲ್‌: ಸೆಮಿಗೆ ಭಾರತ ತಂಡ

Published:
Updated:
Deccan Herald

ಥಿಂಪು, ಭೂತಾನ್‌: ಹದಿನೈದು ವರ್ಷದೊಳಗಿನ ಭಾರತದ ಕಿರಿಯ ಮಹಿಳಾ ತಂಡವು ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ನ ಚಾಂಪಿಯನ್‌ಷಿಪ್‌ನಲ್ಲಿ (ಎಸ್‌ಎಸ್‌ಎಫ್‌ಎಫ್‌) ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 

ಸೋಮವಾರ ಇಲ್ಲಿನ ಚಾಂಗ್ಲಿಮಿತಾಂಗ್‌ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತ ತಂಡವು 1–0 ಗೋಲಿನಿಂದ ಹಾಲಿ ಚಾಂಪಿಯನ್‌ ಭೂತಾನ್‌ ತಂಡವನ್ನು ಮಣಿಸಿತು. 

ಸೆಮಿಫೈನಲ್‌ ಪಂದ್ಯವು ಗುರುವಾರ ನಡೆಯಲಿದೆ. ಇನ್ನೊಂದು ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ನೇಪಾಳ ಹಾಗೂ ಬಾಂಗ್ಲಾದೇಶದ ತಂಡಗಳು ಸೆಣಸಲಿವೆ. ಇದರಲ್ಲಿ ಜಯಿಸುವ ತಂಡದೊಂದಿಗೆ ಭಾರತ ತಂಡವು ಸೆಮಿಫೈನಲ್‌ನಲ್ಲಿ ಆಡಲಿದೆ.  

ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಬಿರುಸಿನ ಆಟವಾಡಿದವು. 31ನೇ ನಿಮಿಷದಲ್ಲಿ ಕೃತಿನಾ ದೇವಿ ಅವರು ಗೋಲು ಗಳಿಸಲು ಯತ್ನಿಸಿ ವಿಫಲರಾದರು. ಮೊದಲಾರ್ಧದ ಅಂತ್ಯಕ್ಕೆ ಎರಡೂ ತಂಡಗಳು ಗೋಲು ಗಳಿಸಿರಲಿಲ್ಲ. 58ನೇ ನಿಮಿಷದಲ್ಲಿ ಭಾರತ ತಂಡವು ಖಾತೆ ತೆರೆಯಿತು. ಶಿಲ್ಕಿ ದೇವಿ ಅವರು ಗೋಲು ಗಳಿಸಿ 1–0ಯ ಮುನ್ನಡೆ ಹೊಂದಲು ನೆರವಾದರು. ಮುಂದಿನ ಅವಧಿಯಲ್ಲಿ ಭಾರತದ ರಕ್ಷಣಾ ವಿಭಾಗದ ಆಟಗಾರ್ತಿಯರು ಎಚ್ಚರಿಕೆಯ ಆಟವಾಡಿ ಪಂದ್ಯ ಜಯಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !