ಶುಕ್ರವಾರ, ಅಕ್ಟೋಬರ್ 18, 2019
20 °C

ಇರಾನ್‌: ಮಹಿಳೆಯರಿಗೂ ಪಂದ್ಯ ವೀಕ್ಷಣೆಗೆ ಅವಕಾಶ

Published:
Updated:

ಟೆಹರಾನ್‌ : ಇರಾನಿನ ಫುಟ್‌ಬಾಲ್‌ಪ್ರಿಯ ಮಹಿಳೆಯರು ಗುರುವಾರ ನಡೆಯಲಿರುವ ಪಂದ್ಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ.

ಬರೇ ಪುರುಷರಿಗಷ್ಟೇ ಪಂದ್ಯ ವೀಕ್ಷಿಸುವ ಅವಕಾಶ ನೀಡುವ ಇರಾನ್‌ನ ವಿವಾದಾತ್ಮಕ ನಿಯಮದ ವಿರುದ್ಧ ಅಮಾನತು ಶಿಕ್ಷೆ ವಿಧಿಸುವುದಾಗಿ ಫಿಫಾ ಎಚ್ಚರಿಕೆ ನೀಡಿತ್ತು. ಸುಮಾರು 40 ವರ್ಷಗಳಿಂದ ಮಹಿಳೆಯರಿಗೆ ಫುಟ್‌ಬಾಲ್‌ ಪಂದ್ಯ ವೀಕ್ಷಿಸುವುದನ್ನು ಈ ಇಸ್ಲಾಮಿಕ್‌ ರಿಪಬ್ಲಿಕ್ ದೇಶದಲ್ಲಿ ನಿಷೇಧಿಸಲಾಗಿದೆ.

ಯಾವುದೇ ನಿರ್ಬಂಧ ಹೇರದೇ ಮಹಿಳೆಯರಿಗೂ ಫುಟ್‌ಬಾಲ್‌ ಕ್ರೀಡಾಂಗಣಗಳಿಗೆ ಪ್ರವೇಶಾವಕಾಶ ನೀಡಬೇಕೆಂದು ಕಳೆದ ತಿಂಗಳಷ್ಟೇ ಫಿಫಾ ಇರಾನ್‌ಗೆ ಕಟ್ಟಪ್ಪಣೆ ವಿಧಿಸಿತ್ತು. 

ಇರಾನ್‌, ಗುರುವಾರ ಆಜಾದಿ ಸ್ಟೇಡಿಯಂನಲ್ಲಿ ನಡೆಯುವ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಕಾಂಬೋಡಿಯಾವನ್ನು ಎದುರಿಸಲಿದೆ. 3,500 ಮಹಿಳೆಯರು ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಈ ಕ್ರೀಡಾಂಗಣದಲ್ಲಿ 10 ಸಾವಿರ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶವಿದೆ.

ಬಾಲಕನ ರೀತಿ ಉಡುಪು ಧರಿಸಿ ಪಂದ್ಯವೊಂದನ್ನು ವೀಕ್ಷಿಸಿದ್ದ ‘ಬ್ಲೂ ಗರ್ಲ್‌’ ಹೆಸರಿನ ಅಭಿಮಾನಿಯೊಬ್ಬಳು ತನಗೆ ಜೈಲುಶಿಕ್ಷೆ ಆಗಬಹುದೆಂಬ ಭಯದಲ್ಲಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

 

Post Comments (+)