ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಟ್ರಿ ಬಳಗಕ್ಕೆ ಸೆಮಿಫೈನಲ್ ನಿರೀಕ್ಷೆ

Last Updated 17 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಫತೋರ್ಡ, ಗೋವಾ: ಸೆಮಿಫೈನಲ್ ಪ್ರವೇಶಿಸುವ ನಿರೀಕ್ಷೆಯೊಂದಿಗೆ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಎದುರಿಸಲಿದೆ.

ಆರಂಭದಲ್ಲಿ ಕೆಲವು ಪಂದ್ಯಗಳಲ್ಲಿ ನೀರಸ ಆಟವಾಡಿದ್ದ ಬಿಎಫ್‌ಸಿ ನಂತರ ಚೇತರಿಸಿಕೊಂಡಿತ್ತು. ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಅಮೋಘ ಆಟವಾಡಿ ಅಗ್ರ ನಾಲ್ಕರ ಘಟ್ಟ ಪ್ರವೇಶಿಸಿತ್ತು. ನಂತರ ಕೆಳಗೆ ಇಳಿದಿತ್ತು. ಇದೀಗ ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಮತ್ತೊಮ್ಮೆ ಅಗ್ರ ನಾಲ್ಕರ ಘಟ್ಟಕ್ಕೇರುವ ನಿರೀಕ್ಷೆಯಲ್ಲಿದೆ.

ಸತತ ಮೂರು ಪಂದ್ಯಗಳಲ್ಲಿ ಗೆದ್ದಿದ್ದ ಬಿಎಫ್‌ಸಿ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ವಿರುದ್ಧ ಸೋತಿದೆ. 17 ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದುಕೊಂಡಿರುವ ನಾರ್ತ್ ಈಸ್ಟ್ ಯುನೈಟೆಡ್ ಎದುರು ಗೆಲುವು ಸಾಧಿಸುವುದು ತಂಡಕ್ಕೆ ಸವಾಲಾಗಲಾರದು ಎಂಬುದು ಕೋಚ್ ಮಾರ್ಕೊ ಪೆಜೊವೊಲಿ ಅಭಿಪ್ರಾಯ.

ಬಿಎಫ್‌ಸಿಗೆ ಲೀಗ್ ಹಂತದಲ್ಲಿ ಇನ್ನು ನಾಲ್ಕು ಪಂದ್ಯಗಳು ಉಳಿದಿವೆ. ಈ ಎಲ್ಲ ಪಂದ್ಯಗಳನ್ನು ಗೆದ್ದರೆ ಮಾತ್ರ ನಾಕೌಟ್ ಹಂತಕ್ಕೇರುವ ಹಾದಿ ಸುಲಭವಾಗಲಿದೆ. 16 ಪಂದ್ಯಗಳಿಂದ 23 ಪಾಯಿಂಟ್ ಕಲೆ ಹಾಕಿರುವ ತಂಡ ಮುಂದಿನ ಪಂದ್ಯಗಳಲ್ಲಿ ಒಡಿಶಾ, ಎಟಿಕೆಎಂಬಿ ಮತ್ತು ಈಸ್ಟ್ ಬೆಂಗಾಲ್ ಸವಾಲು ಎದುರಿಸಬೇಕಾಗಿದೆ. ಬಿಎಫ್‌ಸಿಗೆ ಶುಕ್ರವಾರದ ಪಂದ್ಯದಲ್ಲಿ ರೋಷನ್ ಸಿಂಗ್ ಅವರು ಲಭ್ಯರಿಲ್ಲ.

ಸತತ 10 ಪಂದ್ಯಗಳಲ್ಲಿ ಜಯ ಕಾಣದ ನಾರ್ತ್ ಈಸ್ಟ್ ಯುನೈಟೆಡ್ ಮುಂದಿನ ಪಂದ್ಯಗಳಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ವಿ.ಪಿ.ಸುಹೇರ್ ಅವರಿಗೆ ಎಂಟು ಪಂದ್ಯಗಳಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಲಯಕ್ಕೆ ಮರಳಲು ಅವರು ಪ್ರಯತ್ನಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT