ಐಎಸ್‌ಎಲ್‌: ಎಟಿಕೆಗೆ ಜಯ

ಭಾನುವಾರ, ಏಪ್ರಿಲ್ 21, 2019
26 °C

ಐಎಸ್‌ಎಲ್‌: ಎಟಿಕೆಗೆ ಜಯ

Published:
Updated:

ಕೋಲ್ಕತ್ತ: ದ್ವಿತೀಯಾರ್ಧದಲ್ಲಿ ಅಂಕಿತ್‌ ಮುಖರ್ಜಿ ಗಳಿಸಿದ ಗೋಲಿನ ನೆರವಿನಿಂದ ಎಟಿಕೆ ತಂಡ ಈ ಸಲದ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಗೆದ್ದಿದೆ.

ಸಾಲ್ಟ್‌ ಲೇಕ್‌ ಮೈದಾನದಲ್ಲಿ ಭಾನುವಾರ ನಡೆದ ಹೋರಾಟದಲ್ಲಿ ಎಟಿಕೆ 2–1 ಗೋಲುಗಳಿಂದ ಡೆಲ್ಲಿ ಡೈನಾಮೊಸ್ ತಂಡವನ್ನು ಮಣಿಸಿತು.

ಈ ಜಯದೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 24ಕ್ಕೆ ಹೆಚ್ಚಿಸಿಕೊಂಡ ಎಟಿಕೆ, ಆರನೇ ಸ್ಥಾನದೊಂದಿಗೆ ಈ ಬಾರಿಯ ಅಭಿಯಾನ ಮುಗಿಸಿತು.

ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಮೊದಲಾರ್ಧ ಗೋಲು ರಹಿತವಾಗಿತ್ತು. ದ್ವಿತೀಯಾರ್ಧದ ಶುರುವಿನಲ್ಲಿ (63ನೇ ನಿಮಿಷ) ಎಡು ಗಾರ್ಸಿಯ ಗೋಲು ಹೊಡೆದು ಎಟಿಕೆ ಖಾತೆ ತೆರೆದರು. 72ನೇ ನಿಮಿಷದಲ್ಲಿ ನಂದ ಕುಮಾರ್‌ ಚೆಂಡನ್ನು ಗುರಿ ಮುಟ್ಟಿಸಿದ್ದರಿಂದ ಡೈನಾಮೊಸ್‌ 1–1 ಸಮಬಲ ಸಾಧಿಸಿತು. 88ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ ಅಂಕಿತ್‌ ಮುಖರ್ಜಿ ತವರಿನ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !