ಚೆಟ್ರಿ ಪಡೆಗೆ ಜಯದ ಭರವಸೆ

ಸೋಮವಾರ, ಮೇ 27, 2019
24 °C
ಐಎಸ್‌ಎಲ್ ಫುಟ್‌ಬಾಲ್: ಆತಿಥೇಯರಿಗೆ ಗೆಲ್ಲುವ ತವಕ

ಚೆಟ್ರಿ ಪಡೆಗೆ ಜಯದ ಭರವಸೆ

Published:
Updated:
Prajavani

ಹೊಸದಿಲ್ಲಿ (ಪಿಟಿಐ): ಕಳೆದ ಕೆಲವು ಪಂದ್ಯಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ನೀಡಲು ವಿಫಲವಾಗಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಗೆಲುವಿನ ಭರವಸೆಯಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದೆ.

ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬಿಎಫ್‌ಸಿಗೆ ಡೆಲ್ಲಿ ಡೈನಾಮೊಸ್ ಎದುರಾಳಿ. ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಬಿಎಫ್‌ಸಿ ಪ್ಲೇ ಆಫ್ ಹಂತ ತಲುಪಲು ಉಳಿದಿರುವ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಸಾಕು. ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಡೆಲ್ಲಿ ವಿರುದ್ಧ ಗೆಲ್ಲಲು ತಂಡಕ್ಕೆ ಉತ್ತಮ ಅವಕಾಶವಿದೆ.

ಏಷ್ಯಾ ಕಪ್‌ ಚಾಂಪಿಯನ್‌ಷಿಪ್‌ಗಾಗಿ ಐಎಸ್‌ಎಲ್‌ಗೆ ವಿರಾಮ ನೀಡಿದ ನಂತರದ ನಾಲ್ಕು ಪಂದ್ಯಗಳಲ್ಲಿ ಬಿಎಫ್‌ಸಿ ಒಂದನ್ನು ಮಾತ್ರ ಗೆದ್ದಿದೆ. ದುರ್ಬಲ ಚೆನ್ನೈಯಿನ್‌ ಎಫ್‌ಸಿ ಎದುರು ಸೋತಿದ್ದ ತಂಡ ಮುಂಬೈ ಸಿಟಿಗೂ ಮಣಿದಿತ್ತು. ಕೇರಳ ಬ್ಲಾಸ್ಟರ್ಸ್‌ ಎದುರು ಡ್ರಾ ಸಾಧಿಸಿತ್ತು. ನಾರ್ತ್ ಈಸ್ಟ್ ಯುನೈಟೆಡ್ ಎದುರು ಕೇವಲ ಒಂದು ಗೋಲಿನ ಅಂತರದಲ್ಲಿ ಗೆದ್ದಿತ್ತು.

ಹಿಂದಿನ ಪಂದ್ಯಗಳಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದ ಕೋಚ್ ಕಾರ್ಲ್ಸ್‌ ಕ್ವದ್ರತ್‌ ಭಾನುವಾರ ಮತ್ತೆ ಬಲಿಷ್ಠ ತಂಡವನ್ನೇ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಪ್ಲೇ ಆಫ್‌ ಹಂತದಿಂದ ಹೊರ ಬಿದ್ದಿರುವ ಡೆಲ್ಲಿ ತಂಡ ಬಿಎಫ್‌ಸಿ ಎದುರಿನ ಈ ಹಿಂದಿನ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಸೋಲಿಗೆ ಶರಣಾಗಿತ್ತು. ಆದ್ದರಿಂದ ಈಗ ಸೇಡಿಗಾಗಿ ಕಾಯುತ್ತಿದೆ. ಈ ಕಾರಣದಿಂದ ಪಂದ್ಯ ರೋಚಕವಾಗುವ ಸಾಧ್ಯತೆ ಇದೆ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !