ನವದೆಹಲಿ (ಪಿಟಿಐ): ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ 2026–27ರ ಋತುವಿನ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ದೇಶದ ಅಗ್ರಶ್ರೇಣಿಯ ಫುಟ್ಬಾಲ್ ಟೂರ್ನಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಸೆಪ್ಟೆಂಬರ್ 1ರಿಂದ ಏಪ್ರಿಲ್ 11ರವರೆಗೆ ನಡೆಯಲಿದೆ.

ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಕಳೆದ ಋತುವಿನಲ್ಲಿ ಐಎಸ್ಎಲ್ ಟೂರ್ನಿಯನ್ನು ಮೊಟಕುಗೊಳಿಸಲಾಗಿತ್ತು. ಮುಂದಿನ ಆವೃತ್ತಿಯು ಪೂರ್ಣ ಏಳು ತಿಂಗಳು ನಡೆಯಲಿದೆ.

ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಇಂಡಿಯನ್ ಫುಟ್ಬಾಲ್ ಲೀಗ್ (ಐಎಫ್ಎಲ್) ಅಕ್ಟೋಬರ್ 9ರಿಂದ ಮಾರ್ಚ್ 14 ರವರೆಗೆ; ಭಾರತ ಮಹಿಳಾ ಲೀಗ್ (ಐಡಬ್ಲ್ಯುಎಲ್) ಸೆಪ್ಟೆಂಬರ್ 3ರಿಂದ ಜನವರಿ 24 ರವರೆಗೆ ಮತ್ತು ಫೆಡರೇಷನ್ ಕಪ್ ಏಪ್ರಿಲ್ 20 ರಿಂದ ಮೇ 10 ರವರೆಗೆ ನಿಗದಿಯಾಗಿದೆ.

ಐ-ಲೀಗ್ 2 ಟೂರ್ನಿಯು ಫೆಬ್ರವರಿ 1ರಿಂದ ಏಪ್ರಿಲ್ 11 ರವರೆಗೆ ನಡೆಯಲಿದೆ. ಡುರಾಂಡ್ ಕಪ್ ಟೂರ್ನಿ ಜುಲೈ 11 ರಿಂದ ಆಗಸ್ಟ್ 20 ರವರೆಗೆ ನಡೆಯಲಿದೆ. ಸಂತೋಷ್ ಟ್ರೋಫಿಗಾಗಿ ನಡೆಯುವ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ ನವೆಂಬರ್ 19ರಿಂದ ಜನವರಿ 17 ರವರೆಗೆ ನಿಗದಿಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-1413893879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.