ಸೋಮವಾರ, ಜುಲೈ 4, 2022
21 °C

ಐಎಸ್‌ಎಲ್‌: ಡೈನಾಮೋಸ್‌ಗೆ ಎಟಿಕೆ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹತ್ತು ದಿನಗಳ ವಿರಾಮದ ಬಳಿಕ ಮತ್ತೆ ಫುಟ್‌ಬಾಲ್‌ ಕಲರವ ಶುರುವಾಗಿದೆ.

ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಇಂಡಿಯನ್‌ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಡೈನಾಮೋಸ್‌ ಮತ್ತು ಎಟಿಕೆ ತಂಡಗಳು ಸೆಣಸಲಿವೆ.

ತವರಿನ ಅಭಿಮಾನಿಗಳ ಎದುರು ಆಡುತ್ತಿರುವ ಡೈನಾಮೋಸ್‌ ಈ ಬಾರಿಯ ಲೀಗ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಕಾತರವಾಗಿದೆ. ಈ ತಂಡ ಪುಣೆ ಸಿಟಿ ಎಫ್‌ಸಿ ವಿರುದ್ಧ ಆಡಿದ್ದ ಹಿಂದಿನ ಪಂದ್ಯದಲ್ಲಿ 1–1 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ತಂಡದ ಖಾತೆಯಲ್ಲಿ ಒಂದು ಪಾಯಿಂಟ್‌ ಇದ್ದು ಪಟ್ಟಿಯಲ್ಲಿ ಆರನೇ ಸ್ಥಾನ ಹೊಂದಿದೆ.

ಮಿಡ್‌ಫೀಲ್ಡರ್‌ ವಿಕ್ರಮ್‌ಜೀತ್‌ ಸಿಂಗ್‌ ಮತ್ತು ಸ್ಟ್ರೈಕರ್‌ ಡೇನಿಯಲ್‌ ಲಾಲಿಂಪುಯಿಯಾ ಈ ಪಂದ್ಯದಲ್ಲಿ ಆಡುವುದು ಅನುಮಾನ. ಪುಣೆ ಎದುರಿನ ಪಂದ್ಯದ ವೇಳೆ ಇವರು ಗಾಯಗೊಂಡಿದ್ದರು. ನಿಷೇಧಕ್ಕೆ ಗುರಿಯಾಗಿರುವ ಡಿಫೆಂಡರ್‌ ಸೇನಾ ರಾಲ್ಟೆ ಕೂಡಾ ಅಲಭ್ಯರಾಗಿದ್ದಾರೆ.

ರಾಣಾ ಘರಾಮಿ, ಅಮಿತ್‌ ತುಡು, ನಾರಾಯಣ್‌ ದಾಸ್‌ ಮತ್ತು ಪ್ರೀತಮ್‌ ಕೋಟಾಲ್‌ ರಕ್ಷಣಾ ವಿಭಾಗದಲ್ಲಿ ತಂಡದ ಶಕ್ತಿಯಾಗಿದ್ದಾರೆ.

ಸ್ಟ್ರೈಕರ್‌ಗಳಾದ ರೋಮಿಯೊ ಫರ್ನಾಂಡೀಸ್‌, ಸಿಯಾಮ್‌ ಹಾಂಗಲ್‌ ಮತ್ತು ವಿನಿತ್‌ ರಾಯ್‌ ಅವರೂ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ. ಎಟಿಕೆ ಕೂಡಾ ಜಯದ ವಿಶ್ವಾಸದಲ್ಲಿದೆ. ಈ ತಂಡ ಈ ಬಾರಿ ಆಡಿರುವ ಎರಡು ಪಂದ್ಯಗಳಲ್ಲೂ ಸೋತಿದೆ.

ಆರಂಭ: ರಾತ್ರಿ 7.30    ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು