ಗುರುವಾರ , ನವೆಂಬರ್ 21, 2019
21 °C
ಇಂಡಿಯನ್‌ ಸೂಪರ್‌ ಲೀಗ್‌: ಹೆಚ್ಚುವರಿ ಅವಧಿಯಲ್ಲಿ ಗೋವಾ ಗೋಲು

ಐಎಸ್‌ಎಲ್‌ ಪಂದ್ಯ ಡ್ರಾ

Published:
Updated:
Prajavani

ಗುವಾಹಟಿ: ಐಎಸ್‌ಎಲ್ ಫುಟ್‌ಬಾಲ್‌ ಪಂದ್ಯದಲ್ಲಿ ನಾರ್ತ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು 2–2ರ ಡ್ರಾ ಸಾಧಿಸಿದವು.

ಇಲ್ಲಿಯ ಇಂದಿರಾಗಾಂಧಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡದ ಹ್ಯುಗೊ ಬೊಮೌಸ್‌ 31ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು. 54ನೇ ನಿಮಿಷದಲ್ಲಿ ನಾರ್ತ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿಯ ಅಸಮೋಹ್‌ ಗ್ಯಾನ್‌ ಗೋಲು ಹೊಡೆದು ಸಮಬಲ ಸಾಧಿಸಿದರು. ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡದ ರೆಡೀಮ್‌ ತ್ಲಾಂಗ್‌ 74ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿದರು. 90+5ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಗೋವಾ ತಂಡದ ಮನ್‌ವೀರ್‌ ಸಿಂಗ್‌ ಎನ್‌ಇಯು ಎಫ್‌ಸಿ ಗೆಲುವಿನ ಆಸೆ ಚಿವುಟಿ ಹಾಕಿದರು.

ಪ್ರತಿಕ್ರಿಯಿಸಿ (+)