ಐಎಸ್‌ಎಲ್‌ ಫುಟ್‌ಬಾಲ್: ಮುಂಬೈ–ಜೆಮ್‌ಶೆಡ್‌ಪುರ ಪೈಪೋಟಿ

7

ಐಎಸ್‌ಎಲ್‌ ಫುಟ್‌ಬಾಲ್: ಮುಂಬೈ–ಜೆಮ್‌ಶೆಡ್‌ಪುರ ಪೈಪೋಟಿ

Published:
Updated:

ಮುಂಬೈ: ಜೋರ್ಗೆ ಕೋಸ್ಟಾ ಕೋಚ್‌ ಆಗಿ ನೇಮಕಗೊಂಡ ಬಳಿಕ ಮೊದಲ ಪಂದ್ಯ ಆಡುತ್ತಿರುವ ಮುಂಬೈ ಸಿಟಿ ಫುಟ್‌ಬಾಲ್‌ ಕ್ಲಬ್‌ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಐದನೇ ಆವೃತ್ತಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

ಮಂಗಳವಾರ ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ನಡೆಯುವ ಪೈಪೋಟಿಯಲ್ಲಿ ಮುಂಬೈ ಸಿಟಿ ತಂಡ ಜೆಮ್‌ಶೆಡ್‌ಪುರ ಎಫ್‌ಸಿ ವಿರುದ್ಧ ಸೆಣಸಲಿದೆ.

ಮುಂಬೈ ಸಿಟಿ ಈ ಬಾರಿ ಡಿಫೆಂಡರ್‌ ಸೌವಿಕ್‌ ಚಕ್ರವರ್ತಿ, ಮಿಡ್‌ಫೀಲ್ಡರ್‌ಗಳಾದ ರೇನಿಯರ್‌ ಫರ್ನಾಂಡೀಸ್‌ ಮತ್ತು ಸುಭಾಶಿಶ್‌ ಬೋಸ್‌ ಅವರನ್ನು ತನ್ನತ್ತ ಸೆಳೆದುಕೊಂಡಿದೆ. ಪೋರ್ಚುಗಲ್‌ನ ಪಾಲೊ ಮಚಾಡೊ ಮತ್ತು ಬ್ರೆಜಿಲ್‌ನ ಸ್ಟ್ರೈಕರ್‌ ರಾಫೆಲ್‌ ಬಾಸ್ಟೋಸ್‌ ಅವರ ಸೇರ್ಪಡೆಯಿಂದ ತಂಡದ ಶಕ್ತಿ ಹೆಚ್ಚಿದೆ.

ರುಮೇನಿಯಾದ ಲೂಸಿಯಾನ್‌ ಗೊಯಿನಾ, ಅರ್ನಾಲ್ಡ್‌ ಇಸೊಕೊ, ಸೌವಿಕ್‌ ಘೋಷ್‌ ಮತ್ತು ಅನ್ವರ್‌ ಅಲಿ ಅವರೂ ಕಾಲ್ಚಳಕ ತೋರಲು ಕಾಯುತ್ತಿದ್ದಾರೆ.

ಮಿಡ್‌ಫೀಲ್ಡ್‌ ವಿಭಾಗದಲ್ಲಿ ಆಡುವ ಸೆನೆಗಲ್‌ನ ಮೊಡೊವು ಸೌಗೌ ಅವರು ಎದುರಾಳಿ ತಂಡದ ರಕ್ಷಣಾ ವಿಭಾಗವನ್ನು ಸುಲಭವಾಗಿ ಭೇದಿಸುವ ಸಾಮರ್ಥ್ಯ ಹೊಂದಿದ್ದಾರೆ.

ಜೆಮ್‌ಶೆಡ್‌ಪುರ ತಂಡ ಹಿಂದಿನ ಆವೃತ್ತಿಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿತ್ತು. ಸೀಸರ್‌ ಫೆರಾಂಡೊ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಈ ತಂಡ ಮುಂಬೈಗೆ ಆಘಾತ ನೀಡಲು ಕಾಯುತ್ತಿದೆ.

ಹಿಂದಿನ ಆವೃತ್ತಿಯಲ್ಲಿ ಜೆಮ್‌ಶೆಡ್‌ಪುರ ತಂಡ ಮುಂಬೈ ಎದುರು ಎರಡು ಪಂದ್ಯಗಳನ್ನು ಆಡಿತ್ತು. ಈ ಪೈಕಿ ಒಂದರಲ್ಲಿ ಗೆದ್ದಿದ್ದ ತಂಡ ಇನ್ನೊಂದನ್ನು ಡ್ರಾ ಮಾಡಿಕೊಂಡಿತ್ತು.

ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !