ಐಎಸ್‌ಎಲ್‌: ಪುಣೆ ಸಿಟಿ ಜಯಭೇರಿ

ಮಂಗಳವಾರ, ಮಾರ್ಚ್ 26, 2019
27 °C

ಐಎಸ್‌ಎಲ್‌: ಪುಣೆ ಸಿಟಿ ಜಯಭೇರಿ

Published:
Updated:
Prajavani

ಪುಣೆ: ಆತಿಥೇಯ ಪುಣೆ ಸಿಟಿ ಎಫ್‌ಸಿ ತಂಡ ಪ್ರಬಲ ಎದುರಾಳಿ ಎಫ್‌ಸಿ ಮುಂಬೈ ಸಿಟಿಯನ್ನು ಮಣಸಿ ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಅಭಿಯಾನ ಮುಕ್ತಾಯಗೊಳಿಸಿತು.

ಇಲ್ಲಿ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಪುಣೆ 2–1ರಿಂದ ಗೆದ್ದಿತು.

18ನೇ ನಿಮಿಷದಲ್ಲಿ ಆದಿಲ್ ಖಾನ್‌ ಮತ್ತು 84ನೇ ನಿಮಿಷದಲ್ಲಿ ಲೇನ್ ಹ್ಯೂಮ್‌ ಅವರು ಪುಣೆಗೆ ಗೋಲು ತಂದಿತ್ತರು. ಮುಂಬೈಗೆ 90ನೇ ನಿಮಿಷದಲ್ಲಿ ಅರ್ನಾಲ್ಡ್ ಇಸೊಕೊ ಸಮಾಧಾನಕರ ಗೋಲು ಗಳಿಸಿಕೊಟ್ಟರು.

ಇಂದು ಎಟಿಕೆ–ಡೈನಾಮೊಸ್ ಸೆಣಸು: ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಎಟಿಕೆ ತಂಡದ ಡೆಲ್ಲಿ ಡೈನಾಮೊಸ್ ಎದುರು ಸೆಣಸಲಿದೆ. ಎರಡೂ ತಂಡಗಳು ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿವೆ. ಆದ್ದರಿಂದ ಗೆಲುವಿನೊಂದಿಗೆ ಅಭಿಯಾನಕ್ಕೆ ಅಂತ್ಯ ಹಾಡಲು ಪ್ರಯತ್ನಿಸಲಿವೆ.

ಬೆಂಗಳೂರಿನಲ್ಲಿ ಸೆಮಿಫೈನಲ್ ಪಂದ್ಯ‌

ಐಎಸ್‌ಎಲ್‌ನ ಸೆಮಿಫೈನಲ್‌ ಹಣಾಹಣಿಯ ಒಂದು ಪಂದ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇದೇ 11ರಂದು ನಡೆಯಲಿದೆ. ಎರಡು ಲೆಗ್‌ಗಳಲ್ಲಿ ಸೆಮಿಫೈನಲ್ ನಡೆಯಲಿದ್ದು ಮೊದಲ ಲೆಗ್‌ನ ಮೊದಲ ಪಂದ್ಯ ಗುವಾಹಟಿಯಲ್ಲಿ ಏಳರಂದು ನಡೆಯಲಿದೆ.

ಒಂಬತ್ತರಂದು ಮೊದಲ ಲೆಗ್‌ನ ಎರಡನೇ ಪಂದ್ಯ, 11ರಂದು ಎರಡನೇ ಲೆಗ್‌ನ ಮೊದಲ ಪಂದ್ಯ, 12ರಂದು ಎರಡನೇ ಲೆಗ್‌ನ ಎರಡನೇ ಪಂದ್ಯ ನಡೆಯಲಿದೆ. 17ರಂದು ಮುಂಬೈಯಲ್ಲಿ ಫೈನಲ್ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !