ಸೋಮವಾರ, ಜುಲೈ 4, 2022
21 °C

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಪುಣೆ ತಂಡಕ್ಕೆ ಫಿಲ್‌ ಕೋಚ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಎಫ್‌ಸಿ ಪುಣೆ ಸಿಟಿ ತಂಡ ಇಂಗ್ಲೆಂಡ್‌ನ ಫಿಲ್‌ ಬ್ರೌನ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿದೆ.

ಪುಣೆ ಫ್ರಾಂಚೈಸ್‌ ಸೋಮವಾರ ಈ ವಿಷಯ ತಿಳಿಸಿದೆ.

 59 ವರ್ಷದ ಫಿಲ್‌ ಅವರು ವೃತ್ತಿಬದುಕಿನಲ್ಲಿ ಒಟ್ಟು 652 ಪಂದ್ಯಗಳನ್ನು ಆಡಿ 46 ಗೋಲುಗಳನ್ನು ದಾಖಲಿಸಿದ್ದಾರೆ.

ಬೋಲ್ಟನ್‌ ವಾಂಡರರ್ಸ್‌, ಡರ್ಬಿ ಕೌಂಟಿ, ಹಲ್‌ ಸಿಟಿ, ಪ್ರೆಸ್ಟನ್‌ ನಾರ್ತ್‌ ಎಂಡ್‌, ಸೌತೆಂಡ್‌ ಯುನೈಟೆಡ್‌, ಸ್ವಿಂಡನ್‌ ಟೌನ್‌ ಕ್ಲಬ್‌ಗಳ ಕೋಚ್‌ ಆಗಿ ಕೆಲಸ ಮಾಡಿದ ಅನುಭವವನ್ನೂ ಹೊಂದಿದ್ದಾರೆ.

1999ರಲ್ಲಿ ಬ್ಲಾಕ್ ಪೂಲ್‌ ಕ್ಲಬ್‌ನ ಸಹಾಯಕ ಕೋಚ್‌ ಆಗಿ ನೇಮಕವಾಗಿದ್ದ ಫಿಲ್‌ ಅವರು 2006ರಲ್ಲಿ ಹಲ್‌ ಸಿಟಿ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡಿದ್ದರು. ಹಲ್‌ ಸಿಟಿ ತಂಡ ಪ್ರೀಮಿಯರ್‌ ಲೀಗ್‌ಗೆ ಅರ್ಹತೆ ಗಳಿಸುವಲ್ಲಿ ಫಿಲ್‌ ಪಾತ್ರ ಮಹತ್ವದ್ದಾಗಿತ್ತು.

‘ಪುಣೆ ಸಿಟಿ ತಂಡ ಈ ಬಾರಿಯ ಲೀಗ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿಲ್ಲ. ಈ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿರುವುದು ಖುಷಿ ನೀಡಿದೆ. ಮುಂದಿನ ಪಂದ್ಯಗಳಲ್ಲಿ ತಂಡದಿಂದ ಉತ್ತಮ ಸಾಮರ್ಥ್ಯ ಮೂಡಿಬರಬೇಕು. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ಹೆಣೆಯುತ್ತೇನೆ’ ಎಂದು ಫಿಲ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು