ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಕೆಗೆ ಆಘಾತ ನೀಡಿದ ಜೆಮ್ಶೆಡ್‌ಪುರ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಗೋಲು ಗಳಿಸಿದ ಡೊಂಗೆಲ್, ಲೀಮಾ
Last Updated 6 ಡಿಸೆಂಬರ್ 2021, 16:19 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ತಲಾ ಒಂದೊಂದು ಗೋಲು ಗಳಿಸಿದ ಜೆಮ್ಶೆಡ್‌ಪುರ ಎಫ್‌ಸಿ ತಂಡ ಬಲಿಷ್ಠ ಎಟಿಕೆಎಂಬಿ ಎದುರು ಜಯ ಗಳಿಸಿತು.

ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜೆಮ್ಶೆಡ್‌ಪುರ 2–1ರಲ್ಲಿ ಜಯ ಗಳಿಸಿತು.

37ನೇ ನಿಮಿಷದಲ್ಲಿ ಸೆಮಿನ್ಲೆನ್ ಡೊಂಗೆಲ್ ಜೆಮ್ಶೆಡ್‌ಪುರಕ್ಕೆ ಮೊದಲ ಗೋಲು ಗಳಿಸಿಕೊಟ್ಟರು. ಮಿಡ್‌ಫೀಲ್ಡ್‌ನಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಜಿತೇಂದ್ರ ಸಿಂಗ್ ವೇಗವಾಗಿ ಮುನ್ನುಗ್ಗಿದರು. ಸೆಮಿನ್ಲೆನ್ ಡೊಂಗೆಲ್ ಓಡಿ ಬರುತ್ತಿರುವುದನ್ನು ಗಮನಿಸಿದ ಅವರು ಚೆಂಡನ್ನು ಅವರತ್ತ ತಳ್ಳಿದರು. ಡೊಂಗೆಲ್ ನಿಖರವಾಗಿ ಗೋಲುಪೆಟ್ಟಿಯಗೆಯತ್ತ ಒದ್ದು ಸಂಭ್ರಮಿಸಿದರು.

84ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಲೀಮಾ ಅವರು ಜೆಮ್ಶೆಡ್‌ಪುರದ ಮುನ್ನಡೆ ಹೆಚ್ಚಿಸಿದರು. ಅಂಗಣದ ಮಧ್ಯಭಾಗದಿಂದ ಡ್ರಿಬಲ್ ಮಾಡುತ್ತ ಬಂದ ಬೋರಿಸ್ ಸಿಂಗ್ ಅವರಿಂದ ಚೆಂಡನ್ನು ಪಡೆದ ಲೀಮಾ ಸುಲಭವಾಗಿ ಗೋಲು ದಾಖಲಿಸಿದರು.

89ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಪ್ರೀತಂ ಕೊತಾಲ್ ಅವರು ಎಟಿಕೆಎಂಬಿ ಪಾಳಯದಲ್ಲಿ ನಿರೀಕ್ಷೆ ಮೂಡಿಸಿದರು. ಆದರೆ ಎದುರಾಳಿಗಳ ಭದ್ರ ಕೋಟೆ ಭೇದಿಸಿ ಸಮಬಲ ಸಾಧಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಮೊದಲ ಜಯದ ನಿರೀಕ್ಷೆಯಲ್ಲಿ ಬೆಂಗಾಲ್, ಗೋವಾ

ವಾಸ್ಕೊದಲ್ಲಿ ಮಂಗಳವಾರ ಎಫ್‌ಸಿ ಗೋವಾ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ತಂಡಗಳು ಸೆಣಸಲಿವೆ. ಆರಂಭದಲ್ಲಿ ನಿರಾಸೆ ಕಂಡಿರುವ ಈಸ್ಟ್ ಬೆಂಗಾಲ್ ಹಿಂದಿನ ‍ಪಂದ್ಯದಲ್ಲಿ ಬಲಿಷ್ಠ ಚೆನ್ನೈಯಿನ್ ಎಫ್‌ಸಿ ವಿರುದ್ಧ ಗೋಲುರಹಿತ ಡ್ರಾ ಮಾಡಿಕೊಂಡು ಭರವಸೆಯಲ್ಲಿದೆ. ಹೀಗಾಗಿ ತಂಡದಲ್ಲಿ ಈ ಆವೃತ್ತಿಯ ಮೊದಲ ಗೆಲುವಿನ ಆಸೆ ಚಿಗುರಿದೆ.

ಜೆಮ್ಶೆಡ್‌ಪುರ ಎದುರಿನ ಮೊದಲ ಪಂದ್ಯವನ್ನು 1–1ರಲ್ಲಿ ಡ್ರಾ ಮಾಡಿಕೊಂಡಿದ್ದ ಈಸ್ಟ್ ಬೆಂಗಾಲ್ ನಂತರ ಸತತ ಎರಡು ಸೋಲು ಕಂಡಿತ್ತು. ಮೂರು ಪಂದ್ಯಗಳಲ್ಲಿ ಒಟ್ಟು 10 ಗೋಲುಗಳನ್ನು ಬಿಟ್ಟುಕೊಟ್ಟಿತ್ತು.

ಯುವಾನ್ ಫೆರ್ನಾಂಡೊ ಕೋಚ್ ಆಗಿರುವ ಎಫ್‌ಸಿ ಗೋವಾ ಮೂರು ಪಂದ್ಯಗಳನ್ನು ಆಡಿದ್ದು ಎಲ್ಲದರಲ್ಲೂ ಸೋತಿದೆ. ಒಟ್ಟು ಎಂಟು ಗೋಲು ಬಿಟ್ಟುಕೊಟ್ಟಿರುವ ತಂಡ ಗಳಿಸಿರುವುದು ನಾಲ್ಕು ಗೋಲು ಮಾತ್ರ. ಹೀಗಾಗಿ ಆ ತಂಡವೂ ಮೊದಲ ಜಯದ ನಿರೀಕ್ಷೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT