ಸೋಮವಾರ, ಡಿಸೆಂಬರ್ 9, 2019
17 °C

ಜಪಾನ್‌ ತಂಡಕ್ಕೆ ಹೊಸ ಕೋಚ್‌

Published:
Updated:

ನರಿಟಾ, ಜಪಾನ್‌: ‘ಜಪಾನ್ ತಂಡಕ್ಕೆ ಶೀಘ್ರವೇ ಹೊಸ ಕೋಚ್‌ ನೇಮಿಸುತ್ತೇವೆ’ ಎಂದು ಜಪಾನ್‌ ಫುಟ್‌ಬಾಲ್‌ ಸಂಸ್ಥೆಯ (ಜೆಎಫ್‌ಎ) ಅಧ್ಯಕ್ಷ ಕೊಜೊ ತಶಿಮಾ ನುಡಿದಿದ್ದಾರೆ.

ಜಪಾನ್‌ ತಂಡ ಈ ಬಾರಿಯ ಫಿಫಾ ವಿಶ್ವಕಪ್‌ನ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬೆಲ್ಜಿಯಂ ಎದುರು ಸೋತಿತ್ತು. ಹೀಗಾಗಿ ಅಕಿರಾ ನಿಶಿನೊ ಅವರನ್ನು ಮುಖ್ಯ ಕೋಚ್‌ ಹುದ್ದೆಯಲ್ಲಿ ಮುಂದುವರಿಸದಿರಲು ಜೆಎಫ್‌ಎ ನಿರ್ಧರಿಸಿದೆ.

ಪೋಲೆಂಡ್‌ ಎದುರಿನ ‘ಎಚ್‌’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಜಪಾನ್‌ ಸೋತಿತ್ತು. ಈ ಹೋರಾಟದಲ್ಲಿ ನಿಶಿನೊ ಪರಿಣಾಮಕಾರಿ ಯೋಜನೆ ಹೆಣೆಯಲು ವಿಫಲರಾಗಿದ್ದರು ಎಂದು ಹಲವರು ಟೀಕಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು