ಗುರುವಾರ , ಡಿಸೆಂಬರ್ 5, 2019
19 °C

ಜಪಾನ್‌ನ ಮಕೊಟೊ ಹಸೆಬೆ ವಿದಾಯ

Published:
Updated:

ಟೊಕಿಯೊ: ಜಪಾನ್‌ ತಂಡದ ನಾಯಕ ಮಕೊಟೊ ಹಸೆಬೆ ಅವರು ಬುಧವಾರ ಅಂತರರಾಷ್ಟ್ರೀಯ ಫುಟ್‌ಬಾಲ್‌ ಬದುಕಿಗೆ ವಿದಾಯ ಹೇಳಿದ್ದಾರೆ. 

‘ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದೇನೆ. ನನ್ನ ತಂಡ ಬೆಲ್ಜಿಯಂ ಎದುರು ವಿರೋಚಿತ ಹೋರಾಟ ನಡೆಸಿತು. ಆದರೆ, ಕೊನೆಗೆ ಗೆಲುವು ಅವರದ್ದಾಯಿತು’ ಎಂದು 34 ವರ್ಷದ ಆಟಗಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 

ಸೋಮವಾರ ನಡೆದ ಬೆಲ್ಜಿಯಂ ವಿರುದ್ಧದ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜಪಾನ್‌ ತಂಡವು 3–2ರಿಂದ ಸೋತಿತ್ತು. ಈ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು.

12 ವರ್ಷಗಳ ಕಾಲ ಜಪಾನ್‌ ತಂಡದಲ್ಲಿ ಆಡಿದ್ದ ಮಕೊಟೊ, ಮಿಡ್‌ಫೀಲ್ಡ್‌ ವಿಭಾಗದ ಪ್ರಮುಖ ಆಟಗಾರರಾಗಿದ್ದರು. ಮೂರು ವಿಶ್ವಕಪ್‌ಗಳಲ್ಲಿ ಅವರು ತಂಡವನ್ನು ಪ್ರತಿನಿಧಿಸಿದ್ದಾರೆ. ಸದ್ಯ ಅವರು ಜರ್ಮನಿಯ ಪ್ರತಿಷ್ಠಿತ ಎನ್‌ಟ್ರಾಚ್‌ ಫ್ರ್ಯಾಂಕ್‌ಫರ್ಟ್‌ ಕ್ಲಬ್‌ನಲ್ಲಿ ಆಡುತ್ತಿದ್ದಾರೆ. 

ಈ ಬಾರಿಯ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘವಾಗಿ ಆಡಿದ್ದ ಜಪಾನ್‌ ತಂಡವು ಮುಂದಿನ ವರ್ಷದ ಆರಂಭದಲ್ಲಿಯೇ ಏಷ್ಯಾ ಕಪ್‌ ಆಡಲು ಯು.ಎ.ಇಗೆ ಪ್ರಯಾಣ ಬೆಳೆಸಲಿದೆ.

ಮಂಗಳವಾರವಷ್ಟೇ ಜಪಾನ್‌ನ ಪ್ರಮುಖ ಆಟಗಾರ ಕೆಸುಕಿ ಹೋಂಡಾ ಅವರು ಅಂತರರಾಷ್ಟ್ರಿಯ ಫುಟ್‌ಬಾಲ್‌ಗೆ ವಿದಾಯ ಹೇಳಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು