7

ಸುಲಭ ಜಯದ ನಿರೀಕ್ಷೆಯಲ್ಲಿ ಜಪಾನ್‌

Published:
Updated:
ಪೋಲೆಂಡ್ ಎದುರಿನ ಪಂದ್ಯಕ್ಕೆ ಸಜ್ಜಾಗಿರುವ ಜಪಾನ್ ತಂಡದ ಆಟಗಾರರು ದೈಹಿಕ ಕಸರತ್ತು ನಡೆಸಿದರು ಎಎಫ್‌ಪಿ ಚಿತ್ರ

ವೊಲ್ಗೊಗ್ರಾಡ್‌ (ಎಎಫ್‌ಪಿ): ಎರಡು ಪಂದ್ಯಗಳಲ್ಲಿ  ಸೋತಿರುವ ಪೋಲೆಂಡ್‌ ವಿರುದ್ಧ ಸುಲಭ ಜಯ ಸಾಧಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರುವ ನಿರೀಕ್ಷೆಯಲ್ಲಿರುವ ಜಪಾನ್‌ ತಂಡ ಗುರುವಾರ ಕಣಕ್ಕೆ ಇಳಿಯಲಿದೆ.

ವೊಲ್ಗೊಗ್ರಾಡ್‌ ಅರೆನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ ಜಪಾನ್ ತನ್ನ ಬುಟ್ಟಿಯಲ್ಲಿರುವ ಪಾಯಿಂಟ್‌ಗಳ ಸಂಖ್ಯೆಯನ್ನು ಏಳಕ್ಕೆ ಏರಿಸಲಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ಮೂರನೇ ಬಾರಿ ನಾಕೌಟ್ ಹಂತಕ್ಕೇರಿದ ಸಾಧನೆ ಮಾಡಲಿದೆ.

ಆದರೆ ಪೋಲೆಂಡ್ ಎದುರು ಡ್ರಾ ಸಾಧಿಸಿದರೆ ತಂಡದ ಭವಿಷ್ಯ ಅತಂತ್ರವಾಗಲಿದ್ದು ಗುಂಪಿನ ಮತ್ತೊಂದು ಪಂದ್ಯ ಫಲಿತಾಂಶದ ಮೇಲೆ ಮುಂದಿನ ಹಾದಿ ನಿರ್ಣಯ ಆಗಲಿದೆ. ಇಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಪೋಲೆಂಡ್‌ ಗುಂಪು ಹಂತದ ಕೊನೆಯ ‍ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.  ಈ ಪಂದ್ಯದಲ್ಲಿ ಸೋತರೆ ಅದು ವಿಶ್ವಕಪ್ ಇತಿಹಾಸದಲ್ಲಿ ಪೋಲೆಂಡ್‌ನ ಅತ್ಯಂತ ಕಳಪೆ ಸಾಧನೆ ಆಗಲಿದೆ. 2002 ಮತ್ತು 2006ರಲ್ಲೂ ಈ ತಂಡ ನಾಕೌಟ್ ಹಂತಕ್ಕೇರಲಾಗದೆ ಮರಳಿತ್ತು. ಆದರೆ ಆ ಆವೃತ್ತಿಗಳಲ್ಲಿ ಕೊನೆಯ ಪಂದ್ಯಗಳನ್ನು ತಂಡ ಗೆದ್ದಿತ್ತು.

‘ಎರಡು ಪಂದ್ಯಗಳಿಂದ ನಾಲ್ಕು ಪಾಯಿಂಟ್‌ಗಳನ್ನು ಸಂಪಾದಿಸಲು ಸಾಧ್ಯವಾಗಿರುವುದು ಸಂತಸದ ವಿಷಯ. ಆದರೆ ಟೂರ್ನಿಯಲ್ಲಿ ಈ ವರೆಗೆ ಮಹತ್ವದ್ದನ್ನು ಸಾಧಿಸಲು ಆಗಲಿಲ್ಲ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಗುರುವಾರ ಜಯ ಗಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು’ ಎಂದು ಜಪಾನ್ ತಂಡದ ನಾಯಕ ಮಕೊಟೊ ಹಸೆಬೆ ಅಭಿಪ್ರಾಯಪಟ್ಟರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !