ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಬದಲಿಸಲು ಆಗಿಲ್ಲ: ರಿತ್ಸು ದೊವನ್

Last Updated 6 ಡಿಸೆಂಬರ್ 2022, 13:43 IST
ಅಕ್ಷರ ಗಾತ್ರ

ದೋಹಾ: ‘ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ನಾವು ಅತ್ಯುತ್ತಮವಾಗಿ ಆಡಿದರೂ ಅದಕ್ಕೆ ಬೆಲೆ ಇಲ್ಲದಾಯಿತು. ಇತಿಹಾಸವನ್ನು ಬದಲಿಸಲು ನಮಗೆ ಸಾಧ್ಯವಾಗಲಿಲ್ಲ’ ಎಂದು ಜಪಾನ್‌ ತಂಡದ ಆಟಗಾರ ರಿತ್ಸು ದೊವನ್ ಹೇಳಿದ್ದಾರೆ.

‘ಸ್ಪೇನ್‌ ಮತ್ತು ಜರ್ಮನಿ ತಂಡಗಳ ವಿರುದ್ಧ ದೊರೆತ ಗೆಲುವು ಕೂಡಾ ಈಗ ಲೆಕ್ಕಕ್ಕಿಲ್ಲ’ ಎಂದು ಕ್ರೊವೇಷ್ಯಾ ವಿರುದ್ಧ ಸೋಮವಾರ ನಡೆದ ವಿಶ್ವಕಪ್‌ ಟೂರ್ನಿಉ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದ ಬಳಿಕ ಅವರು ಪ್ರತಿಕ್ರಿಯಿಸಿದ್ಧಾರೆ.

ಜಪಾನ್‌ ತಂಡ 16ರ ಘಟ್ಟದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 1–3 ರಲ್ಲಿ ಕ್ರೊವೇಷ್ಯಾ ಎದುರು ಸೋತಿತ್ತು. ನಿಗದಿತ ಮತ್ತು ಹೆಚ್ಚುವರಿ ಅವಧಿಯಲ್ಲಿ ಉಭಯ ತಂಡಗಳು 1–1 ಗೋಲುಗಳ ಸಮಬಲ ಸಾಧಿಸಿದ್ದರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಗಿತ್ತು.

ಜಪಾನ್ ತಂಡ ಈ ಹಿಂದಿನ ಮೂರು ವಿಶ್ವಕಪ್‌ ಟೂರ್ನಿಗಳಲ್ಲಿ 16ರ ಘಟ್ಟದಲ್ಲಿ ಸೋತು ಹೊರಬಿದ್ದಿತ್ತು. ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಬೇಕೆಂಬ ತಂಡದ ಆಸೆ ಈ ಬಾರಿಯೂ ಕೈಗೂಡಲಿಲ್ಲ.

‘ನಾಲ್ಟಿ ಶೂಟೌಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಆಗದ್ದು ನಿರಾಸೆ ಉಂಟುಮಾಡಿತು’ ಎಂದು ಜಪಾನ್‌ ಕೋಚ್‌ ಹಜಿಮೆ ಮೊರಿಯಸು ಹೇಳಿದ್ದಾರೆ.

‘ಪೆನಾಲ್ಟಿಯಲ್ಲಿ ಯಶಸ್ಸಿಗೆ ಕಠಿಣ ತರಬೇತಿಯ ಜತೆಗೆ ಅಲ್ಪ ಅದೃಷ್ಟವೂ ಬೇಕು. ಕ್ರೊವೇಷ್ಯಾ ಗೋಲ್‌ಕೀಪರ್‌ ಅತ್ಯುತ್ತಮ ರೀತಿಯಲ್ಲಿ ಗೋಲುಗಳನ್ನು ತಡೆದರು. ನಮ್ಮ ಆಟಗಾರರು ಪೆನಾಲ್ಟಿಯಲ್ಲಿ ಇನ್ನಷ್ಟು ಉತ್ತಮವಾಗಿ ಆಡಬೇಕಿತ್ತು. ಭವಿಷ್ಯದಲ್ಲಿ ಅದೆ ಬಗ್ಗೆ ಗಮನ ನೀಡಲಾಗುವುದು’ ಎಂದಿದ್ದಾರೆ.

ಜಪಾನ್‌ನ ಮೂವರು ಆಟಗಾರರ ಪೆನಾಲ್ಟಿ ಕಿಕ್‌ಅನ್ನು ಕ್ರೊವೇಷ್ಯಾ ಗೋಲ್‌ಕೀಪರ್‌ ಯಶಸ್ವಿಯಾಗಿ ತಡೆದು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT