ಮಂಗಳವಾರ, ನವೆಂಬರ್ 19, 2019
26 °C
ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ದಕ್ಷಿಣ ವಲಯ ಅರ್ಹತಾ ಸುತ್ತು

ಸಂತೋಷ್ ಟ್ರೋಫಿ: ರಾಜ್ಯ ತಂಡ ಪ್ರಕಟ

Published:
Updated:

ಬೆಂಗಳೂರು: ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ದಕ್ಷಿಣ ವಲಯ ಅರ್ಹತಾ ಸುತ್ತಿನ ಟೂರ್ನಿಗೆ ಕರ್ನಾಟಕ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಇದೇ 5ರಿಂದ 10ರವರೆಗೆ ಕೇರಳದ ಕೋಯಿಕ್ಕೋಡ್‌ನಲ್ಲಿ ಟೂರ್ನಿ ನಡೆಯಲಿದೆ. 

ರಾಜ್ಯ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಕರ್ನಾಟಕ ನವೆಂಬರ್‌ 6ರಂದು ಮೊದಲ ಪಂದ್ಯವನ್ನು ಪುದುಚೇರಿ ಎದುರು ಹಾಗೂ ಎರಡನೇ ಪಂದ್ಯವನ್ನು 8ರಂದು ತೆಲಂಗಾಣ ವಿರುದ್ಧ ಆಡಲಿದೆ.

ತಂಡ: ಸುನಿಲ್‌ ಕುಮಾರ್‌ ಎಂ.(ನಾಯಕ), ಸೋಲೈಮಲೈ (ಉಪ ನಾಯಕ), ಜಯಂತ್‌ ಕುಮಾರ್‌, ರಮೀಸ್ ವಿ.ಪಿ., ನಾಮಗ್ಯಾಲ್‌ ಭುಟಿಯಾ, ಜಾನ್‌ ಪೀಟರ್‌, ಜಾನ್ಸನ್‌ ಎ., ರಾಜೇಂದ್ರ ಸಿಂಗ್‌, ಕೈತ್‌ ರೇಮಂಡ್‌ ಸ್ಟೀಫನ್‌, ಬಿಸ್ವ ದರ್ಜೀ, ಎಡ್ವಿನ್‌ ರೊಸಾರಿಯೊ, ವಿಘ್ನೇಶ್‌ ಗುಣಶೇಖರ್‌, ಅಮಯ್‌ ಮೋರಜ್‌ಕರ್‌, ನೋರಾಮ್‌ ರೋಷನ್‌ ಸಿಂಗ್‌, ಶೆಲ್ಟನ್‌ ಪೌಲ್‌ ಡಿ., ಧನುಷ್‌ ಡಿ., ಎಂ.ನೋಖಿಲ್‌ ರಾಜ್‌, ದಿಪ್‌ ಮಜುಮ್‌ದಾರ್‌, ಸುಧೀರ್ ಕೋಟಿಕೆಲ, ಮೊಹಮ್ಮದ್‌ ನಿಯಾಜ್‌.

ಪ್ರತಿಕ್ರಿಯಿಸಿ (+)