ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಬಿಎಫ್‌ಸಿಯಲ್ಲೇ ಉಳಿದ ಕೀನ್ ಲ್ಯೂವಿಸ್‌

Published:
Updated:
Prajavani

ಬೆಂಗಳೂರು: ಮಿಡ್‌ಫೀಲ್ಡರ್ ಕೀನ್ ಲ್ಯೂವಿಸ್ ಅವರು ಬೆಂಗಳೂರು ಫುಟ್‌ಬಾಲ್ ಕ್ಲಬ್‌ನಲ್ಲೇ (ಬಿಎಫ್‌ಸಿ) ಉಳಿಯಲಿದ್ದಾರೆ. ಅವರ ಗುತ್ತಿಗೆಯನ್ನು ಗುರುವಾರ ನವೀಕರಿಸಲಾಗಿದ್ದು ಮುಂದಿನ ವರ್ಷದ ಅಂತ್ಯದ ವರೆಗೆ ತಂಡದಲ್ಲೇ ಇರುವರು ಎಂದು ಪ್ರಕಟಣೆ ತಿಳಿಸಿದೆ. 

ಟಾಟಾ ಫುಟ್‌ಬಾಲ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಕೀನ್‌ ಅವರು ಮಹಿಂದ್ರಾ ಯುನೈಟೆಡ್ ಕ್ಲಬ್‌ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಯೂತ್ ವಿಭಾಗದ ವಿವಿಧ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷ ಬಿಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

ಕಳೆದ ಬಾರಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯಲ್ಲಿ ಎಟಿಕೆ ಎದುರಿನ ಪಂದ್ಯದಲ್ಲಿ ಎರಿಕ್ ಪಾರ್ಟಲು ಬದಲಿಗೆ ಕಣಕ್ಕೆ ಇಳಿದಿದ್ದ ಕೀನ್‌ ಅನೇಕ ಪಂದ್ಯಗಳಲ್ಲಿ ಹೆಚ್ಚುವರಿ ಆಟಗಾರನಾಗಿ ತಂಡದಲ್ಲಿದ್ದರು.

Post Comments (+)