ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಅಗ್ರಸ್ಥಾನದ ಮೇಲೆ ಕೇರಳ ಕಣ್ಣು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಚೆನ್ನೈಯಿನ್‌ಗೆ ಜೆಎಫ್‌ಸಿ ಸವಾಲು
Last Updated 1 ಜನವರಿ 2022, 13:40 IST
ಅಕ್ಷರ ಗಾತ್ರ

ವಾಸ್ಕೊ: ಎರಡು ದಿನಗಳ ವಿರಾಮದ ನಂತರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿ ಭಾನುವಾರ ಮತ್ತೆ ಕಳೆಗಟ್ಟಲಿದ್ದು ಹೊಸ ವರ್ಷದಲ್ಲಿ ಹೊಸ ನಿರೀಕ್ಷೆಯೊಂದಿಗೆ ತಂಡಗಳು ಸವಾಲಿಗೆ ಸಜ್ಜಾಗಿವೆ.

ಭಾನುವಾರ ಎರಡು ಪಂದ್ಯಗಳು ನಡೆಯಲಿದ್ದು ವಾಸ್ಕೊದಲ್ಲಿ ನಡೆಯಲಿರುವ ಮೊದಲ ಹಣಾಹಣಿಯಲ್ಲಿ ಕೇರಳ ಬ್ಲಾಸ್ಟರ್ಸ್‌ ಮತ್ತು ಅತಿಥೇಯ ಎಫ್‌ಸಿ ಗೋವಾ ಮುಖಾಮುಖಿಯಾಗಲಿವೆ. ಅಮೋಘ ಲಯದಲ್ಲಿರುವ ಕೇರಳ ತಂಡ ಪಾಯಿಂಟ್‌ ಪಟ್ಟಿಯ ಅಗ್ರಸ್ಥಾನದ ಮೇಲೆ ಕಣ್ಣಿಟ್ಟು ಆಡಲಿದೆ. ಗೋವಾಗೆ ಈ ಬಾರಿ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗದೇ ಇರುವ ಕಾರಣ ಕೇರಳದ ನಿರೀಕ್ಷೆ ಗರಿಗೆದರಿದೆ.

ಹಿಂದಿನ ಏಳು ಪಂದ್ಯಗಳಲ್ಲಿ ಕೇರಳ ಬ್ಲಾಸ್ಟರ್ಸ್ ಸೋಲು ಕಂಡಿಲ್ಲ. ಇವಾನ್ ವುಕೊಮನೊವಿಚ್‌ ತರಬೇತಿ ನೀಡುತ್ತಿರುವ ತಂಡ ಈ ಬಾರಿ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಮಿಡ್‌ಫೀಲ್ಡ್‌ ಮತ್ತು ಫಾರ್ವರ್ಡ್ ವಿಭಾಗದ ಆಟಗಾರರು ತಂಡದ ಆಧಾರವಾಗಿದ್ದಾರೆ.

ಮಿಡ್‌ಫೀಲ್ಡ್ ಜೋಡಿ ಜೀಕ್ಸನ್ ಸಿಂಗ್ ಮತ್ತು ಪುಟಿಯಾ ಅವರ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಆಕ್ರಮಣ ಮತ್ತು ರಕ್ಷಣೆಯಲ್ಲಿ ಅವರಿಬ್ಬರು ಮಿಂಚಲು ಅವಕಾಶ ನೀಡಿದೆ. ಆಕ್ರಮಣ ವಿಭಾಗದಲ್ಲಿ ಅಲ್ವಾರೊ ವಾಸ್ಕ್ವಿಜ್‌ ಅವರ ಬಲವೂ ತಂಡಕ್ಕಿದೆ.

ಎಫ್‌ಸಿ ಗೋವಾಗೆ ಹಿಂದಿನ ಮೂರು ಪಂದ್ಯಗಳಲ್ಲಿ ಜಯ ಗಳಿಸಲು ಸಾಧ್ಯವಾಗಲಿಲ್ಲ. ಹಿಂದಿನ ಪಂದ್ಯದಲ್ಲಿ ಜಾರ್ಜ್‌ ಒರ್ಟಿಜ್‌ ಗೋಲು ಗಳಿಸಿ ಲಯಕ್ಕೆ ಮರಳಿರುವುದರಿಂದ ತಂಡದಲ್ಲಿ ಭರವಸೆ ಮೂಡಿದೆ.

ಜೆಮ್ಶೆಡ್‌ಪುರ–ಚೆನ್ನೈಯಿನ್ ಹಣಾಹಣಿ

ಬ್ಯಾಂಬೊಲಿಮ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ಮತ್ತು ಚೆನ್ನೈಯಿನ್‌ ಎಫ್‌ಸಿ ತಂಡಗಳು ಸೆಣಸಲಿವೆ. ಹಿಂದಿನ ಎರಡು ಪಂದ್ಯಗಳಲ್ಲಿ ಸೋತಿರುವುದರಿಂದ ಚೆನ್ನೈಯಿನ್‌ ನಿರಾಸೆಯಲ್ಲಿದೆ. ರಕ್ಷಣಾ ವಿಭಾಗ ಸ್ವಲ್ಪ ಹಿನ್ನಡೆಯಲ್ಲಿರುವುದು ತಂಡದ ಆತಂಕವನ್ನು ಹೆಚ್ಚಿಸಿದೆ.

ಜೆಮ್ಶೆಡ್‌ಪುರ ಹಿಂದಿನ ಎರಡು ಪಂದ್ಯಗಳಲ್ಲಿ ಸೋತಿದೆ. ಆದರೆ ಚೆನ್ನೈಯಿನ್ ತಂಡದ ರಕ್ಷಣಾ ವಿಭಾಗವನ್ನು ಕೆಡಹುವ ನಿರೀಕ್ಷೆಯಲ್ಲಿದೆ. ಗ್ರೆಗ್ ಸ್ಟೀವರ್ಟ್‌ ಅವರು ತಂಡದ ಭರವಸೆ ಎನಿಸಿದ್ದಾರೆ.

ಇಂದಿನ ಪಂದ್ಯಗಳು

ಕೇರಳ ಬ್ಲಾಸ್ಟರ್ಸ್‌–ಎಫ್‌ಸಿ ಗೋವಾ

ಸ್ಥಳ: ತಿಲಕ್ ಮೈದಾನ್, ವಾಸ್ಕೊ

ಅರಂಭ: ರಾತ್ರಿ 7.30

ಜೆಮ್ಶೆಡ್‌ಪುರ ಎಫ್‌ಸಿ–ಚೆನ್ನೈಯಿನ್ ಎಫ್‌ಸಿ

ಸ್ಥಳ: ಅಥ್ಲೆಟಿಕೊ ಕ್ರೀಡಾಂಗಣ, ಬ್ಯಾಂಬೊಲಿಮ್‌

ಅರಂಭ: ರಾತ್ರಿ 9.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT