ಕೆಜಿಎಫ್: ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ದೈಹಿಕ ಸಾಮರ್ಥ್ಯ ಸದುಪಯೋಗಪಡಿಸಿಕೊಳ್ಳಲು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಹೇಳಿದರು.

ಚಾಂಪಿಯನ್ ರೀಫ್ಸ್ನಲ್ಲಿ ಹೈಗ್ರೌಂಡ್ಸ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಬೇಸಿಗೆ ಫುಟ್ಬಾಲ್ ತರಬೇತಿ ಶಿಬಿರದ ಕಾರ್ಯ ಚಟುವಟಿಕೆಗಳನ್ನು ಶನಿವಾರ ವೀಕ್ಷಿಸಿದ ಅವರು, ಮಕ್ಕಳು ಫುಟ್ಬಾಲ್ನಲ್ಲಿ ಆಸಕ್ತಿ ತೋರಿರುವುದು ಸಂತೋಷಕರವಾಗಿದೆ. ಶಿಬಿರದಲ್ಲಿ ಬಾಲಕಿಯರೂ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯರಾದರೆ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರುತ್ತಾರೆ. ಕೆಜಿಎಫ್ ನಗರವನ್ನು ಮಾದಕ ವಸ್ತುಮುಕ್ತ ನಗರವನ್ನಾಗಿಸುವ ಸಂಕಲ್ಪ ಪೊಲೀಸ್ ಇಲಾಖೆ ಹೊಂದಿದೆ. ಸಾರ್ವಜನಿಕರು ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿ ಪೊಲೀಸರಿಗೆ ನೀಡಬೇಕು ಎಂದು ಎಸ್ಪಿ ಕೋರಿದರು.

ಭಾಗೀರಥಿ ಟ್ರಾವಲ್ಸ್ ನಿರ್ದೇಶಕ ನೀಲ್ ಜೋಸೆಫ್ ಮಾತನಾಡಿ, ಕೆಜಿಎಫ್ ನಗರ ಖ್ಯಾತ ಫುಟ್ಬಾಲ್ ಆಟಗಾರರನ್ನು ರಾಜ್ಯ-ರಾಷ್ಟ್ರಕ್ಕೆ ನೀಡಿದೆ. ಶಿಬಿರದಲ್ಲಿ ಸುಮಾರು 200 ಮಕ್ಕಳು ಭಾಗವಹಿಸಿರುವುದು ಕ್ರೀಡಾ ಆಸಕ್ತಿಗೆ ಸಾಕ್ಷಿಯಾಗಿದೆ ಎಂದರು.

ಕೋಚ್ ಗಳಾದ ವಿಮಲ್ ವಿಲ್ಸನ್, ನವಕುಮಾರ್, ಸೆಂದಿಲ್ ಕುಮಾರ್ ಹಾಗೂ ದಾನಿಗಳಾದ ರಾಮಕೃಷ್ಣ, ತಿರುಮುರುಗನ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-18-291189929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.