ಫುಟ್‌ಬಾಲ್‌: ಫೈನಲ್‌ಗೆ ಮಂಗಳೂರು ಎಫ್‌ಸಿ

7

ಫುಟ್‌ಬಾಲ್‌: ಫೈನಲ್‌ಗೆ ಮಂಗಳೂರು ಎಫ್‌ಸಿ

Published:
Updated:

ಬೆಂಗಳೂರು: ಅಮೋಘ ಆಟ ಆಡಿದ ಮಂಗಳೂರು ಎಫ್‌ಸಿ ತಂಡದವರು ಕೆಎಸ್‌ಎಫ್‌ಎ ಆಶ್ರಯದ ಇಂಪೆಟಸ್‌ ಟ್ರೋಫಿ ಮಹಿಳಾ ಫುಟ್‌ಬಾಲ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಮಂಗಳೂರು ಎಫ್‌ಸಿ 2–0 ಗೋಲುಗಳಿಂದ ಕ್ರೈಸ್ಟ್‌ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿತು.

ವಿಜಯೀ ತಂಡದ ಜಂದಿಲಾ ಮತ್ತು ಡಯಾನ ಡಿಸೋಜ ಅವರು ಕ್ರಮವಾಗಿ 30+1 ಮತ್ತು 60+2ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ನಾಲ್ಕರ ಘಟ್ಟದ ಇನ್ನೊಂದು ಹೋರಾಟದಲ್ಲಿ ಬಿಯುಎಫ್‌ಸಿ 4–0 ಗೋಲುಗಳಿಂದ ಪರಿಕ್ರಮ ಎದುರು ವಿಜಯಿಯಾಯಿತು.

ಬಿಯುಎಫ್‌ಸಿ ತಂಡದ ಪ್ರೊಮಿತಾ ‘ಹ್ಯಾಟ್ರಿಕ್‌’ ಗೋಲು ಗಳಿಸಿ ಗಮನ ಸೆಳೆದರು. ಅವರು 23, 29 ಮತ್ತು 51ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ತಲುಪಿಸಿದರು.

ನಾದಿಯಾ (15ನೇ ನಿ.) ಏಕೈಕ ಗೋಲು ದಾಖಲಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !