ಮಂಗಳವಾರ, ಮೇ 24, 2022
24 °C

ಜೆಮ್ಶೆಡ್‌ಪುರ ಎಫ್‌ಸಿಗೆ ಮಾಡು‍‍–ಮಡಿ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ, ಗೋವಾ: ಜೆಮ್ಶೆಡ್‌ಪುರ ಎಫ್‌ಸಿ ತಂಡಕ್ಕೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪ್ಲೇ ಆಫ್‌ ಹಂತಕ್ಕೇರಲು ಕೊನೆಯ ಅವಕಾಶವೊಂದು ಉಳಿದಿದೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಈ ತಂಡ ಬಲಿಷ್ಠ ಮುಂಬೈ ಸಿಟಿ ಎಫ್‌ಸಿಯನ್ನು ಎದುರಿಸಲಿದ್ದು ಗೆದ್ದರೆ ಮಾತ್ರ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸುವ ಕನಸು ಜೀವಂತವಾಗಿ ಉಳಿಯಲಿದೆ.

ಲೀಗ್‌ನಲ್ಲಿ ಐದು ಪಂದ್ಯಗಳನ್ನು ಗೆದ್ದು 21 ಪಾಯಿಂಟ್ ಗಳಿಸಿರುವ ಜೆಮ್ಶೆಡ್‌ಪುರ ಎಫ್‌ಸಿ ಮುಂದಿನ ಹಂತಕ್ಕೆ ಬಡ್ತಿ ಪಡೆಯಬೇಕಾದರೆ ‌ಉಳಿದಿರುವ ಪಂದ್ಯಗಳೆಲ್ಲವನ್ನೂ ಗೆಲ್ಲಬೇಕು. ಮಾತ್ರವಲ್ಲದೆ ಇತರ ತಂಡಗಳು ಪಾಯಿಂಟ್‌ಗಳನ್ನು ಕಳೆದುಕೊಳ್ಳಬೇಕು. ವಾಸ್ತವದಲ್ಲಿ ಇದು ಅಸಾಧ್ಯದ ಮಾತು. ಆದರೂ ನಿರೀಕ್ಷೆಯಲ್ಲಿರುವ ತಂಡಕ್ಕೆ ಶನಿವಾರ ಗೆಲುವು ಅನಿವಾರ್ಯ. ಮುಂಬೈ ತಂಡ ಎರಡು ಪಾಯಿಂಟ್‌ಗಳ ಅಂತರದಲ್ಲಿ ಎರಡನೇ ಸ್ಥಾನದಲ್ಲಿದ್ದು ಜೆಮ್ಶೆಡ್‌ಪುರ ವಿರುದ್ಧ ಗೆಲುವು ಸಾಧಿಸಿದರೆ ಮತ್ತೆ ಅಗ್ರ ಸ್ಥಾನಕ್ಕೇರಲಿದೆ.

ಜೆಮ್ಶೆಡ್‌ಪುರ ತಂಡದ ಆಕ್ರಮಣ ವಿಭಾಗ ಈ ಬಾರಿ ಗೋಲು ಗಳಿಸಲು ವಿಫಲವಾಗಿದೆ. ಹಿಂದಿನ ಆರು ಪಂದ್ಯಗಳಲ್ಲಿ ಕೇವಲ ಮೂರು ಗೋಲುಗಳನ್ನು ಗಳಿಸಿದೆ. ಒಟ್ಟಾರೆ 16 ಗೋಲುಗಳನ್ನು ಗಳಿಸಿರುವ ತಂಡ 20 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಹೀಗಾಗಿ ಚೇತರಿಸಿಕೊಂಡು ಗೆಲುವಿನ ಹಾದಿಯಲ್ಲಿ ಸಾಗಲು ಪ್ರಯತ್ನಿಸಲಿದೆ.

ಲೀಗ್‌ ಹಂತದ ಚಾಂಪಿಯನ್ ಪಟ್ಟಕ್ಕೇರುವ ಕನಸು ಹೊತ್ತಿರುವ ಮುಂಬೈ ಸಿಟಿ ಎಫ್‌ಸಿಗೆ ಹಿಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧ 2–4ರಲ್ಲಿ ಸೋತಿರುವ ತಂಡ ಅದಕ್ಕೂ ಮೊದಲು ಗೋವಾ ಜೊತೆ 3–3ರ ಡ್ರಾ ಮಾಡಿಕೊಂಡಿತ್ತು. ಹಿಂದಿನ ಐದು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿರುವುದು ಸರ್ಜಿಯೊ ಲೊಬೆರಾ ಬಳಗದ ಆತಂಕಕ್ಕೆ ಕಾರಣವಾಗಿದೆ. ಎಲ್ಲ ದೌರ್ಬಲ್ಯಗಳನ್ನು ಮೀರಿ ಅಂತಿಮ ಹಂತದಲ್ಲಿ ಜಯದ ಹಾದಿಯತ್ತ ಹೊರಳಲು ತಂಡ ಪ್ರಯತ್ನಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು