ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಡೋನಾ ಆರೋಗ್ಯ ಸ್ಥಿರ: ವೈದ್ಯರು

Last Updated 11 ನವೆಂಬರ್ 2020, 14:19 IST
ಅಕ್ಷರ ಗಾತ್ರ

ಬ್ಯೂನಸ್‌ ಐರಿಸ್‌ (ಅರ್ಜೆಂಟೀನಾ): ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಫುಟ್‌ಬಾಲ್‌ ದಿಗ್ಗಜ ಡಿಗೊ ಮರಡೋನಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.ಈ ವಿಷಯವನ್ನು ಮರಡೋನಾ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿರುವ ಮನಶಾಸ್ತ್ರ ವೈದ್ಯ ಡಿಗಿ ಡಿಯಾಜ್‌ ತಿಳಿಸಿದ್ದಾರೆ.

ಅರ್ಜೆಂಟೀನಾದ ಮರಡೋನಾ ಅವರಿಗೆ ಕಳೆದ ವಾರ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

‘ಹಿಂದೆ ಆಗಿರುವ ಅಪಘಾತವೊಂದರಿಂದ ಮರಡೋನಾ ಅವರ ಮೆದುಳಿಗೆ ಸಮಸ್ಯೆಯಾಗಿರುವ ಸಾಧ್ಯತೆಯಿದೆ‘ ಎಂದು ಅವರ ಕುಟುಂಬದ ವೈದ್ಯ ಲೆಪೊಲ್ಡೊ ಲ್ಯೂಗಿ ಹೇಳಿದ್ದಾರೆ. ‘ಆದರೆ ನನಗೆ ಅಂತಹ ಘಟನೆ ಯಾವುದೂ ನೆನಪಿಲ್ಲ‘ ಎಂದು 60ರ ಹರಯದ ಮರಡೋನಾ ಹೇಳಿದ್ದಾರೆ.

‘ಮರಡೋನಾ ಅವರಿಗೆ ಥೆರಪಿಯ ಅವಶ್ಯಕತೆಯಿದೆ. ಪ್ರಮುಖವಾಗಿ ಕುಟುಂಬದ ಸಹಕಾರವೂ ಅಗತ್ಯವಾಗಿದೆ‘ ಎಂದು ಡಿಯಾಜ್‌ ಹೇಳಿದ್ದಾರೆ.

1986ರ ವಿಶ್ವಕಪ್‌ ಟೂರ್ನಿಯಲ್ಲಿ ಮರಡೋನಾ ನಾಯಕತ್ವದ ತಂಡವು ಪಶ್ಚಿಮ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್‌ ಆಗಿತ್ತು. ಮೆಕ್ಸಿಕೊದಲ್ಲಿ ಈ ಟೂರ್ನಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT