ಗುರುವಾರ , ಡಿಸೆಂಬರ್ 5, 2019
21 °C

ಜೆಮ್‌ಶೆಡ್‌ಪುರ–ಚೆನ್ನೈಯಿನ್‌ ಪಂದ್ಯ ಮುಂದಕ್ಕೆ

Published:
Updated:

ನವದೆಹಲಿ: ಜೆಮ್‌ಶೆಡ್‌ಪುರ ಎಫ್‌ಸಿ ಮತ್ತು ಚೆನ್ನೈಯಿನ್‌ ಎಫ್‌ಸಿ ನಡುವಣ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಪಂದ್ಯವನ್ನು ಡಿಸೆಂಬರ್ 9ಕ್ಕೆ ಮುಂದೂಡಲಾಗಿದೆ.

ಉಭಯ ತಂಡಗಳ ನಡುವಣ ಈ ಹಣಾಹಣಿಯು ಡಿಸೆಂಬರ್‌ 6ರಂದು ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ನಿಗದಿಯಾಗಿತ್ತು. ಡಿಸೆಂಬರ್‌ 7ರಂದು ಜಾರ್ಖಂಡ್‌ ವಿಧಾನಸಭಾ ಚುನಾವಣೆ ನಡೆಯಲಿದ್ದು, ಭದ್ರತೆಯ ದೃಷ್ಟಿಯಿಂದ ಪಂದ್ಯ ಮುಂದೂಡಲಾಗಿದೆ.

ಪ್ರತಿಕ್ರಿಯಿಸಿ (+)