ಭಾನುವಾರ, ಆಗಸ್ಟ್ 9, 2020
22 °C

ಈಸ್ಟ್ ಬೆಂಗಾಲ್ ಶತಕ: ಪ್ರಧಾನಿ ಮೋದಿ ಶುಭಾಶಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೂರು ವರ್ಷ ಪೂರೈಸಿದ ಈಸ್ಟ್ ಬೆಂಗಾಲ್ ಫುಟ್‌ಬಾಲ್ ಕ್ಲಬ್‌ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

1920ರ ಕೋಲ್ಕತ್ತದಲ್ಲಿ ಈಸ್ಟ್ ಬೆಂಗಾಲ್ ಕ್ಲಬ್ ಆರಂಭವಾಗಿತ್ತು. ಶನಿವಾರ ಶತಮಾನೋತ್ಸವ ಆಚರಿಸಿಕೊಂಡಿತು. 131 ವರ್ಷಗಳಷ್ಟು ಹಳೆಯದಾದ ಮೋಹನ್ ಬಾಗನ್ ತಂಡವು ಈಸ್ಟ್‌ ಬೆಂಗಾಲ್‌ಗೆ ಕಟ್ಟಾ ಪ್ರತಿಸ್ಪರ್ಧಿಯಾಗಿದೆ.

’ಈಸ್ಟ್ ಬೆಂಗಾಲ್ ಎಫ್‌ಸಿಯಲ್ಲಿ ಆಡಿದ ಎಲ್ಲ ಪೀಳಿಗೆಯ ತಾರೆಗಳಿಗೆ ಶುಭಾಶಯಗಳು. ಭಾರತೀಯ ಕ್ರೀಡೆಯ ಪ್ರಮುಖ ಮೈಲುಗಲ್ಲುಗಳಲ್ಲಿ ಇದೂ ಒಂದು. ಪಶ್ಚಿಮ ಬಂಗಾಳದ ಕ್ರೀಡಾ ಪ್ರೇಮದ ಸಂಕೇತವೂ ಹೌದು.  ಈಸ್ಟ್‌ ಬೆಂಗಾಲ್ ತಂಡದ ದೀವಿಗೆಯು ಕ್ರೀಡಾಂಗಣವನ್ನು ಸದಾ ಬೆಳಗುತಿರಲಿ‘ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು