ಬಾಪೆ ಮೇಲೆ ಮೂರು ಪಂದ್ಯ ನಿಷೇಧ

ಪ್ಯಾರಿಸ್: ಒರಟು ಆಟ ಆಡಿದ್ದಕ್ಕಾಗಿ ಪ್ಯಾರಿಸ್ ಸೇಂಟ್ ಜರ್ಮನ್ ತಂಡದ ಕೈಲಿಯನ್ ಬಾಪೆ ಮೇಲೆ ಮೂರು ಪಂದ್ಯಗಳ ನಿಷೇಧ ಹೇರಲಾಗಿದೆ.
ಹೋದ ಶನಿವಾರ ನಡೆದಿದ್ದ ಫ್ರೆಂಚ್ ಲೀಗ್ ಪಂದ್ಯದ ವೇಳೆ ಬಾಪೆ ಅವರು ನಿಮೆಸ್ ತಂಡದ ತೆಜಿ ಸ್ಯಾವನಿಯೆರ್ ಅವರನ್ನು ಉದ್ದೇಶಪೂರ್ವಕವಾಗಿಯೇ ತಳ್ಳಿ ನೆಲಕ್ಕೆ ಬೀಳಿಸಿದ್ದರು. ಹೀಗಾಗಿ ಅವರಿಗೆ ಪಂದ್ಯದ ರೆಫರಿ ಕೆಂಪು ಕಾರ್ಡ್ ತೋರಿಸಿ ಅಂಗಳದಿಂದ ಆಚೆ ಕಳುಹಿಸಿದ್ದರು.
ನಿಷೇಧದ ಕಾರಣ 19 ವರ್ಷ ವಯಸ್ಸಿನ ಬಾಪೆ, ಸೇಂಟ್ ಎಟಿನ್ನೆ (ಸೆಪ್ಟೆಂಬರ್ 14), ರೆನ್ನೆಸ್ (ಸೆ.23) ಮತ್ತು ರೆಯಿಮ್ಸ್ (ಸೆ.26) ವಿರುದ್ಧದ ಪಂದ್ಯಗಳಲ್ಲಿ ಆಡುವಂತಿಲ್ಲ.
ಈ ಬಾರಿಯ ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಬಾಪೆ ಪಾತ್ರ ನಿರ್ಣಾಯಕವಾಗಿತ್ತು. ನಾಲ್ಕು ಗೋಲುಗಳನ್ನು ದಾಖಲಿಸಿದ್ದ ಅವರು ಟೂರ್ನಿಯ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.