ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಲೀಗ್ ಒನ್‌ ಫುಟ್‌ಬಾಲ್‌: ಕೈಲಿಯನ್ ಬಾಪೆ ‘ಹ್ಯಾಟ್ರಿಕ್‌’

ಪಿಎಸ್‌ಜಿಗೆ ಗೆಲುವು
Last Updated 22 ಏಪ್ರಿಲ್ 2019, 14:20 IST
ಅಕ್ಷರ ಗಾತ್ರ

ಪ್ಯಾರಿಸ್‌: ಯುವ ಆಟಗಾರ ಕೈಲಿಯನ್‌ ಬಾಪೆ, ಭಾನುವಾರ ಮಿಂಚಿನ ಆಟ ಆಡಿ ಪಾರ್ಕ್‌ ಡೆಸ್‌ ಪ್ರಿನ್ಸಸ್‌ ಕ್ರೀಡಾಂಗಣದಲ್ಲಿ ಸೇರಿದ್ದ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಬಾಪೆ ಗಳಿಸಿದ ‘ಹ್ಯಾಟ್ರಿಕ್‌’ ಗೋಲುಗಳ ಬಲದಿಂದ ಪ್ಯಾರಿಸ್‌ ಸೇಂಟ್‌ ಜರ್ಮನ್‌ (ಪಿಎಸ್‌ಜಿ) ತಂಡ ಫ್ರೆಂಚ್‌ ಲೀಗ್‌ ಒನ್‌ ಫುಟ್‌ಬಾಲ್‌ ಪಂದ್ಯದಲ್ಲಿ 3–1 ಗೋಲುಗಳಿಂದ ಮೊನಾಕೊ ತಂಡವನ್ನು ಮಣಿಸಿತು.

ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 84ಕ್ಕೆ ಹೆಚ್ಚಿಸಿಕೊಂಡಿರುವ ತಂಡವು, ಪಟ್ಟಿಯಲ್ಲಿ ಅಗ್ರಸ್ಥಾನ ಗಟ್ಟಿ ಮಾಡಿಕೊಂಡು ಪ್ರಶಸ್ತಿಯ ಹಾದಿ ಸುಗಮ ಮಾಡಿಕೊಂಡಿದೆ.

ಬಾ‍ಪೆ ಅವರು ಈ ಸಲದ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರ ‍ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 30 ಗೋಲುಗಳನ್ನು ಬಾರಿಸಿದ್ದಾರೆ.

ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಪಿಎಸ್‌ಜಿ 15ನೇ ನಿಮಿಷದಲ್ಲಿ ಖಾತೆ ತೆರೆಯಿತು. ಬಾಪೆ ಕಾಲ್ಚಳಕ ತೋರಿದರು. 38ನೇ ನಿಮಿಷದಲ್ಲಿ ಅವರು ಮತ್ತೊಮ್ಮೆ ಮೋಡಿ ಮಾಡಿದರು. ಸಹ ಆಟಗಾರ ಡಾನಿ ಅಲ್ವೆಸ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ಬಾಪೆ, ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿದರು.

ದ್ವಿತೀಯಾರ್ಧದಲ್ಲೂ ಬಾಪೆ ಮ್ಯಾಜಿಕ್‌ ಮುಂದುವರಿದಿತ್ತು. 55ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅವರು ಹ್ಯಾಟ್ರಿಕ್‌ ಪೂರೈಸಿದರು.

80ನೇ ನಿಮಿಷದಲ್ಲಿ ಮೊನಾಕೊ ತಂಡದ ಅಲೆಕ್ಸಾಂಡರ್‌ ಗೊಲೊವಿನ್‌ ಗೋಲು ಬಾರಿಸಿ ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT