ಬೆನ್ನುನೋವಿನಲ್ಲೇ ಆಡಿದ ಬಾಪೆ

7

ಬೆನ್ನುನೋವಿನಲ್ಲೇ ಆಡಿದ ಬಾಪೆ

Published:
Updated:
ಕೈಲಿಯನ್‌ ಬಾಪೆ

ಪ್ಯಾರಿಸ್‌: ‘ತೀವ್ರ ಬೆನ್ನುನೋವಿನ ನಡುವೆಯೂ ಫಿಫಾ ವಿಶ್ವಕಪ್‌ನಲ್ಲಿ ಫೈನಲ್‌ ಪಂದ್ಯದಲ್ಲಿ ಆಡಿದೆ’ ಎಂದು ಫ್ರಾನ್ಸ್‌ ಫುಟ್‌ಬಾಲ್‌ ತಂಡದ ಕೈಲಿಯನ್‌ ಬಾಪೆ ಹೇಳಿದ್ದಾರೆ.  

ಫುಟ್‌ಬಾಲ್‌ಗೆ ಸಂಬಂಧಿಸಿದ ಫ್ರಾನ್ಸ್‌ನ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ‘ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ನನ್ನ ಬೆನ್ನುಹುರಿಗೆ ತೀವ್ರವಾದ ಗಾಯವಾಗಿತ್ತು. 

ತಂಡದ ಸಿಬ್ಬಂದಿ ಹಾಗೂ ಆಟಗಾ ರರಿಗೆ ಈ ಬಗ್ಗೆ ತಿಳಿಸಲಿಲ್ಲ. ಹಾಗೆಯೇ, ಈ ಕುರಿತು ಯಾವುದೇ ರೀತಿಯ ಸುದ್ದಿ ಹೊರಬೀಳದಂತೆ ಎಚ್ಚರ ವಹಿಸಿದೆ. ಇಲ್ಲದಿದ್ದರೆ, ಎದುರಾಳಿ ತಂಡದ ಆಟಗಾರರು ಪಂದ್ಯದ ವೇಳೆ ಈ ದೈಹಿಕ ವೈಫಲ್ಯವನ್ನೇ ಮುಂದಿಟ್ಟುಕೊಂಡು ನನ್ನನ್ನು ಗುರಿ ಮಾಡುತ್ತಿದ್ದರು. ’ ಎಂದು ಬಾಪೆ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !