ಶುಕ್ರವಾರ, ಜನವರಿ 28, 2022
25 °C

ಫುಟ್‌ಬಾಲ್‌: ಎಂಇಜಿ–ಸೆಂಟರ್ ಎಫ್‌ಸಿಗೆ ಗೆಲುವು

ಪ್ರಜಾವಾಣಿ ಚಿತ್ರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎದುರಾಳಿಗಳ ಸವಾಲನ್ನು ದಿಟ್ಟವಾಗಿ ಎದುರಿಸಿದ ಎಂಇಜಿ–ಸೆಂಟರ್ ಎಫ್‌ಸಿ ತಂಡ ಕೆಎಸ್‌ಎಫ್‌ಎ ಮತ್ತು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹಣಾಹಣಿಯಲ್ಲಿ ಎಂಇಜಿ ತಂಡ 2–1ರಲ್ಲಿ ಬೆಂಗಳೂರು ಯುನೈಟೆಡ್ ಎಫ್‌ಸಿಯನ್ನು ಮಣಿಸಿತು. 

25ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಶೇಕ್ ಮುಜೀಬ್  ಅವರು ಎಂಇಜಿಯ ಖಾತೆ ತೆರೆದರು. 45ನೇ ನಿಮಿಷದಲ್ಲಿ ಅರ್ಜುನ್ ಮಧು ಗಳಿಸಿದ ಗೋಲಿನೊಂದಿಗೆ ತಂಡದ ಮುನ್ನಡೆ ಹೆಚ್ಚಿತು. ಬೆಂಗಳೂರು ಯುನೈಟೆಡ್‌ ಪರ ವ್ಯಾಲೆಂಟೈನ್ ಒಡಿನಾಂಬ 61ನೇ ನಿಮಿಷದಲ್ಲಿ ಗೋಲು ಗಳಿಸಿ ಸೋಲಿನ ಅಂತರ ಕಡಿಮೆ ಮಾಡಿದರು.

ಗುರುವಾರ 1.45ಕ್ಕೆ ಎಫ್‌ಸಿ ಡೆಕ್ಕನ್ ಮತ್ತು ಎಎಸ್‌ಸಿ–ಸೆಂಟರ್ ಎಫ್‌ಸಿ ತಂಡಗಳ ನಡುವೆ ಪಂದ್ಯ ನಡೆಯಲಿದ್ದು 3.45ಕ್ಕೆ ಎಡಿಇ ಎಫ್‌ಸಿ ಮತ್ತು ಜವಾಹರ್ ಯೂನಿಯನ್ ಎಫ್‌ಸಿ ತಂಡಗಳು ಸೆಣಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು