ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಬ್‌ ಗೋಲು: ಪೆಲೆ ದಾಖಲೆ ಸರಿಗಟ್ಟಿದ ಮೆಸ್ಸಿ

Last Updated 20 ಡಿಸೆಂಬರ್ 2020, 13:30 IST
ಅಕ್ಷರ ಗಾತ್ರ

ಬಾರ್ಸಿಲೋನಾ: ಒಂದೇ ಕ್ಲಬ್ ಪರ ಹೆಚ್ಚು ಗೋಲು ಹೊಡೆದ ದಿಗ್ಗಜ ಫುಟ್‌ಬಾಲ್ ಆಟಗಾರ ಪೆಲೆ ಅವರ ದಾಖಲೆಯನ್ನು ಲಯೊನೆಲ್ ಮೆಸ್ಸಿ ಸರಿಗಟ್ಟಿದ್ದಾರೆ.

ಬಾರ್ಸಿಲೋನಾ ಕ್ಲಬ್‌ನ ಮೆಸ್ಸಿ ಅವರು ಲಾಲಿಗಾ ಟೂರ್ನಿಯಲ್ಲಿ ಶನಿವಾರ ವೆಲೆನ್ಸಿಯಾ ವಿರುದ್ಧದ ಪಂದ್ಯದಲ್ಲಿ ಗೋಲೊಂದನ್ನು ದಾಖಲಿಸಿದರು.ಈ ಪಂದ್ಯ 2–2ರಲ್ಲಿ ಡ್ರಾ ಆಗಿತ್ತು. ಇದು ಬಾರ್ಸಿಲೋನಾ ಕ್ಲಬ್‌ ಪರ ಮೆಸ್ಸಿ ದಾಖಲಿಸಿದ 643ನೇ ಗೋಲು ಆಗಿತ್ತು. 2004ರಿಂದ ಅವರು ಈ ತಂಡದ ಪರ ಆಡುತ್ತಿದ್ದಾರೆ.

1957ರಿಂದ 74ರವರೆಗೆ ಸ್ಯಾಂಟೋಸ್ ಕ್ಲಬ್ ಪ್ರತಿನಿಧಿಸಿದ್ದ ಬ್ರೆಜಿಲ್‌ನ ಮಾಜಿ ಆಟಗಾರ ಪೆಲೆ ಕೂಡ 643 ಗೋಲು ಹೊಡೆದಿದ್ದರು.

ಅರ್ಜೆಂಟೀನಾ ರಾಷ್ಟ್ರೀಯ ತಂಡದ ಮೆಸ್ಸಿ, ಬಾರ್ಸಿಲೋನಾ ಕ್ಲಬ್ ಹಾಗೂ ಸ್ಪ್ಯಾನಿಷ್ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರ ಕೂಡ ಹೌದು.

2018ರ ಜನವರಿಯಲ್ಲಿ, ಮೆಸ್ಸಿ ಗಳಿಸಿದ ಗೋಲುಗಳ ಸಂಖ್ಯೆ 366 ತಲುಪಿತ್ತು. ಈ ವೇಳೆ ಅವರುಬಂಡೆಸ್‌ಲಿಗಾದ ಗೆರ್ಡ್‌ ಮುಲ್ಲರ್‌ (365) ಅವರ ದಾಖಲೆಯನ್ನು ಅಳಿಸಿಹಾಕಿ, ಯೂರೋಪಿನ ಪ್ರಮುಖ ಲೀಗ್‌ಗಳಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

ತಮ್ಮ ದಾಖಲೆಯನ್ನು ಸರಿಗಟ್ಟಿದ ಮೆಸ್ಸಿ ಅವರನ್ನು ಪೆಲೆ ಅಭಿನಂದಿಸಿದ್ದಾರೆ.

‘ನಿಮ್ಮ ಐತಿಹಾಸಿಕ ದಾಖಲೆಗೆ ಅಭಿನಂದನೆಗಳು. ನಾನು ಧರಿಸುತ್ತಿದ್ದ ಸಂಖ್ಯೆಯ ಜೆರ್ಸಿಯನ್ನು ತೊಟ್ಟು ಆಡುತ್ತಿರುವ ನಿಮ್ಮನ್ನು ನೋಡುವುದು ಖುಷಿಯ ಸಂಗತಿ‘ ಎಂದು ಪೆಲೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT