ಶನಿವಾರ, ಡಿಸೆಂಬರ್ 14, 2019
25 °C

ಮೆಸ್ಸಿ ಮೋಡಿಯಲ್ಲಿ ಮಿನುಗಿದ ಬಾರ್ಸಿಲೋನಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌: ಪಂದ್ಯದ ಕೊನೆಯ ಹಂತದಲ್ಲಿ ಗೋಲು ಹೊಡೆದ ಲಯೊನೆಲ್‌ ಮೆಸ್ಸಿ, ಬಾರ್ಸಿಲೋನಾ ತಂಡಕ್ಕೆ ಜಯ ತಂದಿತ್ತರು. ಭಾನುವಾರ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬಾರ್ಸಿಲೋನಾ, ಅಟ್ಲೆಟಿಕೊ ಮ್ಯಾಡ್ರಿಡ್‌ ಎದುರು 1–0ಯಿಂದ ಗೆದ್ದಿತು.

ದಾಖಲೆಯ ಆರನೇ ಬಾರಿ ಬ್ಯಾಲನ್‌ ಡಿ’ ಒರ್‌ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿರುವ ಅರ್ಜೆಂಟೀನಾದ ಮೆಸ್ಸಿ, ಇಲ್ಲಿನ ವಾಂಡ್ರಾ ಮೆಟ್ರೊ ಪಾಲಿಟಾನೊ ಕ್ರೀಡಾಂಗಣದಲ್ಲಿ 86ನೇ ನಿಮಿಷ ಮೋಡಿ ಮಾಡಿದರು. ಗೋಲುರಹಿತ ಡ್ರಾದತ್ತ ಸಾಗಿದ್ದ ಪಂದ್ಯವನ್ನು ತಮ್ಮ ತಂಡದ ಜಯದತ್ತ ವಾಲಿಸಿದರು.

ಲೂಯಿಸ್‌ ಸ್ವಾರೆಜ್‌ ಅವರ ನೆರವಿನೊಂದಿಗೆ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ ಮೆಸ್ಸಿ, ಬಾರ್ಸಿಲೋನಾ ತಂಡವನ್ನು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಸಿದರು. ರಿಯಲ್‌ ಮ್ಯಾಡ್ರಿಡ್‌ ಹಾಗೂ ಬಾರ್ಸಿಲೋನಾ ತಂಡಗಳ ಬಳಿ ಸದ್ಯ ಆರು ಪಾಯಿಂಟ್ಸ್‌ಗಳಿದ್ದು ಜಂಟಿ ಮೊದಲ ಸ್ಥಾನದಲ್ಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು