ಗುರುವಾರ , ಡಿಸೆಂಬರ್ 5, 2019
21 °C
ಉರುಗ್ವೆಯೊಂದಿಗೆ ಡ್ರಾ ಸಾಧಿಸಿದ ಅರ್ಜೆಂಟೀನಾ

ಮೆಸ್ಸಿ ಗೋಲು: ತಪ್ಪಿದ ಸೋಲು

Published:
Updated:
Prajavani

ಟೆಲ್‌ ಅವಿವ್‌ (ಇಸ್ರೇಲ್‌): ಇಂಜುರಿ ಅವಧಿಯ ಪೆನಾಲ್ಟಿಯಲ್ಲಿ ಗೋಲು ಗಳಿಸಿದ ಲಯೊನೆಲ್‌ ಮೆಸ್ಸಿ ಅರ್ಜೆಂಟೀನಾ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಉರುಗ್ವೆ ಎದುರು ಸೋಮವಾರ ಇಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಮೊದಲು ಹಿನ್ನಡೆ ಅನುಭವಿಸಿದ್ದ ಅರ್ಜೆಂಟೀನಾ ಅಂತಿಮವಾಗಿ 2–2ರಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.

ಪಂದ್ಯದ ಆರಂಭದಲ್ಲಿ ಅರ್ಜೆಂಟೀನಾ ತಂಡವೇ ಆಕ್ರಮಣಕಾರಿ ಆಟದ ಮೂಲಕ ಮುಂದಿತ್ತು. ಆದರೆ 34ನೇ ನಿಮಿಷದಲ್ಲಿ ಲೂಯಿಸ್‌ ಸ್ವಾರೆಜ್‌ ಹಾಗೂ ಲೂಕಾಸ್‌ ಟೊರೆರಾ ನೀಡಿದ ನೆರವಿನಲ್ಲಿ ಗೋಲು ಗಳಿಸಿದ ಎಡಿಸನ್‌ ಕವಾನಿ ಉರುಗ್ವೆಯ ಗೋಲಿನ ಖಾತೆ ತೆರೆದರು.

ಟೆಲ್‌ ಅವಿವ್‌ನಲ್ಲಿ ಹುರಿದುಂಬಿಸುತ್ತಿದ್ದ ತಮ್ಮ ಅಪಾರ ಅಭಿಮಾನಿಗಳನ್ನು ಮೆಸ್ಸಿ ನಿರಾಸೆಗೊಳಿಸಲಿಲ್ಲ. 63ನೇ ನಿಮಿಷದಲ್ಲಿ ಮೋಡಿ ಮಾಡಿದ ಅವರು ಸೆರ್ಜಿಯೊ ಅಗ್ಯುರೊ ಹೆಡರ್‌ ಮೂಲಕ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದರು. ಪಂದ್ಯ 1–1 ಸಮಬಲವಾಯಿತು.

69ನೇ ನಿಮಿಷದಲ್ಲಿ ಸ್ವಾರೆಜ್‌ ಫ್ರಿ ಕಿಕ್‌ ಮೂಲಕ 20 ಮೀಟರ್‌ ಅಂತರದಿಂದ ಚೆಂಡು ಗೋಲುಪೆಟ್ಟಿಗೆಗೆ ಸೇರಿಸುವಲ್ಲಿ ತಪ್ಪು ಮಾಡಲಿಲ್ಲ.  2–1 ಮುನ್ನಡೆ ಗಳಿಸಿದ ಉರುಗ್ವೆಯ ಆಟಗಾರರ ಸಂಭ್ರಮ ಹೆಚ್ಚಿತು.

ಇಂಜುರಿ ಸಮಯದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಮೆಸ್ಸಿ ಹಾಳು ಮಾಡಿಕೊಳ್ಳಲಿಲ್ಲ.  ತಾಳ್ಮೆಯಿಂದ ಗೋಲು ದಾಖಲಿಸಿ ಉರುಗ್ವೆಯ ಸಂತಸ ಕಸಿದರು.

ಪ್ರತಿಕ್ರಿಯಿಸಿ (+)