3

ಮೆಕ್ಸಿಕೊ ತಂಡಕ್ಕೆ ಜಯ

Published:
Updated:

ರೊಸ್ತೋವ್‌ ಆನ್‌ ಡಾನ್‌, ರಷ್ಯಾ: ಇಲ್ಲಿನ ರೊಸ್ತೋವ್‌ ಅರೆನಾದಲ್ಲಿ ಕೊರಿಯಾ ರಿಪಬ್ಲಿಕ್ ವಿರುದ್ಧ ನಡೆದ ಪಂದ್ಯದಲ್ಲಿ ಮೆಕ್ಸಿಕೊ ತಂಡ 2–1ರಿಂದ ಜಯಿಸುವ ಮೂಲಕ ಪ್ರೀ ಕ್ವಾರ್ಟರ್ ಹಂತಕ್ಕೆ ತಲುಪಿದೆ. 

‘ಎಫ್‌’ ಗುಂಪಿನ ಈ ಪಂದ್ಯದ ಆರಂಭದಿಂದಲೂ ಮೆಕ್ಸಿಕೊ ತಂಡವು ಬಿರುಸಿನ ಆಟ ಆಡಿತು. 26ನೇ ನಿಮಿಷದಲ್ಲಿ ಮೆಕ್ಸಿಕೊ ತಂಡಕ್ಕೆ ಪೆನಾಲ್ಟಿ ಸಿಕ್ಕಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಾರ್ಲೋಸ್‌ ವೆಲಾ ಅವರು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಕೊರಿಯಾ ರಿಪಬ್ಲಿಕ್‌ ತಂಡಕ್ಕೆ ಅನೇಕ ಬಾರಿ ಗೊಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ, ಮೆಕ್ಸಿಕೊ ತಂಡದ ರಕ್ಷಣಾ ವಿಭಾಗದ ಆಟಗಾರರು ಆ ಅವಕಾಶಗಳನ್ನು ವಿಫಲಗೊಳಿಸಿದರು. 

ಪಂದ್ಯದ ದ್ವಿತೀಯಾರ್ಧದಲ್ಲಿ ಮೆಕ್ಸಿಕೊ ತಂಡದ ಕ್ಸೇವಿಯರ್‌ ಹರ್ನಾಂಡೆಜ್ ಅವರು ಗೋಲು ದಾಖಲಿಸಿ (66ನೇ ನಿ.) ತಂಡದ ಮುನ್ನಡೆಯನ್ನು ಹೆಚ್ಚಿಸಿದರು. 

ಮೆಕ್ಸಿಕೊ ತಂಡದ ಚುರುಕಿನ ಆಟದಿಂದಾಗಿ ಕೊರಿಯಾ ರಿಪಬ್ಲಿಕ್‌ಗೆ ನಿಗದಿತ ಸಮಯದಲ್ಲಿ ಗೊಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, 93ನೇ ನಿಮಿಷದಲ್ಲಿ ಆ ತಂಡದ ಸನ್‌ ಹುಂಗ್‌ ಮಿನ್‌ ಅವರು ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ತೂರಿಸಿ ಮುನ್ನಡೆಯನ್ನು ತಗ್ಗಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !