ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಎಫ್‌ಸಿಗೆ ಬ್ರೆಜಿಲ್‌ನ ರಫೇಲ್‌ ಆಗಸ್ಟೊ

ಹಾಲಿ ಚಾಂಪಿಯನ್‌ ತಂಡಕ್ಕೆ ಸೇರಿದ ಆರನೇ ವಿದೇಶಿ ಆಟಗಾರ
Last Updated 24 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬ್ರೆಜಿಲ್‌ನ ಮಿಡ್‌ಫೀಲ್ಡರ್‌ ರಫೇಲ್‌ ಆಗಸ್ಟೊ, ಮುಂದಿನ ಎರಡು ವರ್ಷಗಳ ಕಾಲ ಸೂಪ‌ರ್‌ ಲೀಗ್‌ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಪರ ಆಡಲಿದ್ದಾರೆ.

ರಿಯೊ ಡಿ ಜನೈರೊ ನಿವಾಸಿಯಾದ ಆಗಸ್ಟೊ ಅವರು 2020–21ರವರೆಗೆ ಆಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕ್ಲಬ್‌ ಶನಿವಾರ ಪ್ರಕಟಿಸಿದೆ. ಬೆಂಗಳೂರು ತಂಡ ಅಕ್ಟೋಬರ್‌ 21ರಂದು ನಾರ್ತ್‌ ಈಸ್ಟ್‌ ಯುನೈಟೆಡ್‌ ವಿರುದ್ಧ ಆಡುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳಲು ಅಭಿಯಾನ ಆರಂಭಿಸಲಿದೆ.‌

28 ವರ್ಷದ ಆಗಸ್ಟೊ, ಸ್ಪೇನ್‌ನ ಕಾರ್ಲೋಸ್‌ ಕ್ವಾಡ್ರಟ್ ಕೋಚ್‌ ಆಗಿರುವ ಬೆಂಗಳೂರು ಎಫ್‌ಸಿ ತಂಡಕ್ಕೆ ಸೇರುತ್ತಿರುವ ಆರನೇ ವಿದೇಶಿ ಆಟಗಾರ ಎನಿಸಲಿದ್ದಾರೆ. ತಂಡಕ್ಕೆ ಸೇರುವ ಬ್ರೆಜಿಲ್‌ನ ಮೊದಲ ಆಟಗಾರ ಕೂಡ.

ಆಗಸ್ಟೊ ಈ ಸಂದರ್ಭದಲ್ಲಿ ಸಂಭ್ರಮ ವ್ಯಕ್ತಪಡಿಸಿದರು. ‘ಕಳೆದ ವರ್ಷ ಪ್ರಶಸ್ತಿ ಗೆಲ್ಲಲು ಬೆಂಗಳೂರು ತಂಡ ನಡೆಸಿದ ಹೋರಾಟವನ್ನು ಕಂಡು ಬೆರಗಾದೆ. ಬೆಂಗಳೂರು ತಂಡಕ್ಕೆ ಉತ್ತಮ ಕೋಚ್‌ ಇದ್ದಾರೆ. ಒಳ್ಳೆಯ ಆಟಗಾರರ ಪಡೆಯಿದೆ. ಪ್ರೇಕ್ಷಕರ ಬೆಂಬಲವೂ ಇದೆ. ಎಲ್ಲರೂ ಸೇರಿ ಕ್ಲಬ್‌ಗೆ ಇನ್ನಷ್ಟು ಪ್ರಶಸ್ತಿ ಗೆಲ್ಲಿಸಿಕೊಡಬಹುದು’ ಎಂದು ಪ್ರತಿಕ್ರಿಯಿಸಿದರು.

ರಿಕ್‌ ಪಾರ್ಟಲು, ದಿಮಾಸ್‌ ಡೆಲ್ಗಾಡೊ ಮತ್ತು ಯುಜೆನೆಸನ್‌ ಲಿಂಗ್ಡೊ ಅವರನ್ನು ಹೊಂದಿರುವ ತಂಡದ ಮಿಡ್‌ಫೀಲ್ಡ್‌ ಕ್ಷೇತ್ರ ಆಗಸ್ಟೊ ಸೇರ್ಪಡೆಯಿಂದ ಇನ್ನಷ್ಟು ಬಲಿಷ್ಠವಾಗಲಿದೆ.

ಕೋಚ್‌ ಕ್ವಾಡ್ರಟ್‌ ಕೂಡ ಆಗಸ್ಟೊ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ‘ಆತನ ಪ್ರತಿಭೆ ಎಲ್ಲರಿಗೂ ಗೊತ್ತಿರುವಂಥದ್ದೇ. ಆತನಿಂದ ಉತ್ತಮ ಆಟ ಹೊರಬರುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕಾಗಿದೆ’ ಎಂದಿದ್ದಾರೆ.

ಈ ಹಿಂದೆ ಚೆನ್ನೈಯಿನ್‌ ಪರ ಆಡಿದ್ದ ಆಗಸ್ಟೊ 68 ಪಂದ್ಯಗಳಲ್ಲಿ ಏಳೂ ಗೋಲುಗಳನ್ನು ಹೊಡೆದಿದ್ದಾರೆ. ಈ ವರ್ಷ ಬೆಂಗಳೂರು ಎಫ್‌ಸಿಗೆ ಸೇರ್ಪಡೆಯಾದ ಐದನೇ ಆಟಗಾರ ಅವರು. ಮಾನ್ಯುಯೆಲ್‌ ಒನ್ಯು, ಲಿಂಗ್ಡೊ, ಸುರೇಶ್‌ ವಾಂಗ್‌ಜಾಂ್‌ ಮತ್ತು ಪ್ರಭ್‌ಸುಖನ್‌ ಗಿಲ್‌ ಸಹಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT