ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಫ್‌ಎ ಮಹಿಳಾ ‘ಎ’ ಡಿವಿಷನ್ ಲೀಗ್‌: ಮಾಡರ್ನ್‌ ಗರ್ಲ್ಸ್‌ಗೆ ಚಾಂಪಿಯನ್ ಪಟ್ಟ

ಕೆರೂಟ್ಸ್‌ ಫುಟ್‌ಬಾಲ್ ಸ್ಕೂಲ್‌ಗೆ ಸೋಲು
Last Updated 22 ಸೆಪ್ಟೆಂಬರ್ 2021, 14:53 IST
ಅಕ್ಷರ ಗಾತ್ರ

ಬೆಂಗಳೂರು: ಆರುಷಿ ಗಳಿಸಿದ ಹ್ಯಾಟ್ರಿಕ್ ಗೋಲುಗಳು ಮಾಡರ್ನ್ ಗರ್ಲ್ಸ್‌ ಎಫ್‌ಸಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟವು. ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿದ್ದ ಪ್ಲಾನೆಟ್ ಟ್ರೋಫಿ ಮಹಿಳಾ ‘ಎ’ ಡಿವಿಷನ್ ಲೀಗ್‌ನ ಫೈನಲ್‌ನಲ್ಲಿ ರೂಟ್ಸ್‌ ಫುಟ್‌ಬಾಲ್ ಸ್ಕೂಲ್ ತಂಡವನ್ನು 3–1ರಲ್ಲಿ ಮಾಡರ್ನ್ ಗರ್ಲ್ಸ್‌ ಮಣಿಸಿತು.

ಏಳನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಆರುಷಿ, ಮಾಡರ್ನ್ ಗರ್ಲ್ಸ್‌ ಬಳಗದಲ್ಲಿ ಭರವಸೆ ಮೂಡಿಸಿದ್ದರು. 10ನೇ ನಿಮಿಷದಲ್ಲಿ ಶ್ರವ್ಯ ಗಳಿಸಿದ ಗೋಲಿನ ಮೂಲಕ ರೂಟ್ಸ್ ತಿರುಗೇಟು ನೀಡಿತು. ನಂತರದ 30 ನಿಮಿಷಗಳಲ್ಲಿ ಎರಡೂ ತಂಡಗಳು ಪ್ರಬಲ ಪೈಪೋಟಿ ನಡೆಸಿದವು.

40ನೇ ನಿಮಿಷದಲ್ಲಿ ಮಾಡರ್ನ್ ಗರ್ಲ್ಸ್‌ ಯಶಸ್ಸು ಕಂಡಿತು. ಆರುಷಿ ಎರಡನೇ ಗೋಲು ಗಳಿಸಿ ಮಿಂಚಿದರು. 48ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಅವರು ಹ್ಯಾಟ್ರಿಕ್ ಪೂರೈಸುವುದರೊಂದಿಗೆ ತಂಡದ ಜಯವನ್ನೂ ಖಾತರಿ ಮಾಡಿಕೊಂಡರು.

ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಆರುಷಿ ಪಾಲಾಯಿತು. ರೂಟ್ಸ್ ಎಫ್‌ಸಿಯ ಕೃತಿಕಾ ಉತ್ತಮ ಗೋಲ್‌ಕೀಪರ್ ಪ್ರಶಸ್ತಿ ಗಳಿಸಿದರೆ ಮಾಡರ್ನ್ ಗರ್ಲ್ಸ್‌ ಎಫ್‌ಸಿಯ ಸಿಮ್ರಾನ್ ಭಾರ್ಗವ ಉತ್ತಮ ಡಿಫೆಂಡರ್ ಎನಿಸಿಕೊಂಡರು. ಇದೇ ತಂಡದ ಮೈತ್ರೇಯಿ ಉತ್ತಮ ಮಿಡ್‌ಫೀಲ್ಡರ್ ಪ್ರಶಸ್ತಿಗೆ ಭಾಜನರಾದರು. ಉತ್ತಮ ಫಾರ್ವರ್ಡ್‌ ಪ್ರಶಸ್ತಿ ಶ್ರವ್ಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT