ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಇತಿಹಾಸ ನಿರ್ಮಿಸಲಿದೆಯೇ ಮುಂಬೈ ಸಿಟಿ?

ನಾರ್ತ್‌ಈಸ್ಟ್ ಯುನೈಟೆಡ್ ಎದುರು ಪಂದ್ಯ
Last Updated 29 ಜನವರಿ 2021, 14:04 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್‌: ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡವು, ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ನಾರ್ತ್‌ ಈಸ್ಟ್ ಯುನೈಟೆಡ್ ಎಫ್‌ಸಿ ಎದುರು ಕಣಕ್ಕಿಳಿಯಲಿದ್ದು, ಇತಿಹಾಸ ನಿರ್ಮಿಸುವ ಹಂತದಲ್ಲಿದೆ. ಜಿಎಂಸಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಈ ಪಂದ್ಯದಲ್ಲಿ ಗೆಲುವು ಅಥವಾ ಕನಿಷ್ಠ ಡ್ರಾ ಸಾಧಿಸಿದರೆ ಮುಂಬೈ, ಐಎಸ್‌ಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಅಜೇಯವಾಗುಳಿದ ದಾಖಲೆ ಬರೆಯಲಿದೆ. ಕಳೆದ 12 ಪಂದ್ಯಗಳನ್ನು ಸೋಲು ಕಾಣದ ಆ ತಂಡವು ಒಂಬತ್ತರಲ್ಲಿ ಜಯಶಾಲಿಯಾಗಿದ್ದರೆ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. 30 ಪಾಯಿಂಟ್ಸ್‌ಗಳನ್ನು ಕಲೆಹಾಕಿದೆ.

2015ರಲ್ಲಿ ಎಫ್‌ಸಿ ಗೋವಾ ತಂಡವು 12 ಪಂದ್ಯಗಳಲ್ಲಿ ಅಜೇಯವಾಗಿತ್ತು.

ಸೆರ್ಜಿಯೊ ಲೊಬೆರಾ ಮಾರ್ಗದರ್ಶನದಲ್ಲಿ ಪಳಗಿರುವಮುಂಬೈ ತಂಡವು, ಕಳೆದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಡ್ರಾ ಸಾಧಿಸಿದೆ.

‘ಈ ಹಿಂದಿನ ಪಂದ್ಯಗಳ ಬಗ್ಗೆ ಚಿಂತಿಸುವುದಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ನಾರ್ತ್‌ಈಸ್ಟ್ ತಂಡದ ಸಾಮರ್ಥ್ಯದಲ್ಲಿ ಸುಧಾರಣೆ ಕಂಡುಬಂದಿದೆ. ತಂಡದ ಆಟಗಾರರು ಆಕ್ರಮಣಕಾರಿ ಆಟವಾಡುತ್ತಿದ್ದಾರೆ. ನಮಗೆ ಇದು ವಿಭಿನ್ನ ಪಂದ್ಯ. ಈ ಹಣಾಹಣಿಯಲ್ಲಿ ನಾವು ಗೆಲ್ಲಬೇಕಾದರೆ ಶತ ಪ್ರತಿಶತ ಪ್ರಯತ್ನ ಮಾಡಲೇಬೇಕಿದೆ‘ ಎಂದು ಲೊಬೆರಾ ಹೇಳಿದ್ದಾರೆ.

ಹಂಗಾಮಿ ಕೋಚ್‌ ಖಾಲಿದ್ ಜಮೀಲ್‌ ತರಬೇತಿಯಲ್ಲಿರುವ ನಾರ್ತ್‌ಈಸ್ಟ್ ಯುನೈಟೆಡ್ ಕಳೆದ ಎರಡು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ.

‘ಮುಂಬೈ ಸಿಟಿ ಉತ್ತಮ ತಂಡವಾಗಿದೆ. ಆದರೂ ಈ ಪಂದ್ಯದಲ್ಲಿ ಅವರನ್ನು ಮಣಿಸುವ ನಂಬಿಕೆಯಿದೆ. ಆಕ್ರಮಣ ಹಾಗೂ ಡಿಫೆನ್ಸ್ ವಿಭಾಗದಲ್ಲಿ ಶಿಸ್ತು ಕಾಯ್ದುಕೊಳ್ಳಬೇಕಿದೆ‘ ಎಂದು ನಾರ್ತ್‌ಈಸ್ಟ್ ಯುನೈಟೆಡ್ ಸಹಾಯಕ ಕೋಚ್ ಅಲಿಸನ್‌ ಖರ್ಸೆಂಟಿವ್ ಹೇಳಿದ್ದಾರೆ.

ಪಂದ್ಯ ಆರಂಭ: ಸಂಜೆ 7.30
ಸ್ಥಳ: ಜಿಎಂಸಿ ಕ್ರೀಡಾಂಗಣ, ಬ್ಯಾಂಬೊಲಿಮ್‌
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT