ಸೋಮವಾರ, ಆಗಸ್ಟ್ 2, 2021
21 °C

ಯೂರೊ ಕಪ್ ಫುಟ್‌ಬಾಲ್: ವಿಜ್ನಾಲ್ಡಮ್‌ 2 ಗೋಲು; ನೆದರ್ಲೆಂಡ್ಸ್‌ಗೆ ಭರ್ಜರಿ ಜಯ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಆ್ಯಮ್‌ಸ್ಟರ್‌ಡ್ಯಾಮ್‌: ಎರಡು ಗೋಲು ಗಳಿಸಿ ಮಿಂಚಿದ ಜಾರ್ಜಿನಿಯೊ ವಿಜ್ನಾಲ್ಡಮ್‌ ನೆದರ್ಲೆಂಡ್ಸ್ ತಂಡಕ್ಕೆ ಜಯ ತಂದುಕೊಟ್ಟರು. ಯೂರೊ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಆ ತಂಡವು ಸೋಮವಾರ ರಾತ್ರಿ 3–0ಯಿಂದ ನಾರ್ತ್ ಮೆಸಿಡೋನಿಯಾ ತಂಡವನ್ನು ಪರಾಭವಗೊಳಿಸಿತು.

‘ಸಿ’ ಗುಂಪಿನ ಈ ಹಣಾಹಣಿಯಲ್ಲಿ ವಿಜೇತ ತಂಡದ ಪರ ವಿಜ್ನಾಲ್ಡಮ್‌ (51ನೇ ನಿಮಿಷ, 58ನೇ ನಿಮಿಷ) ಎರಡು ಗೋಲು ಹೊಡೆದು ಮಿಂಚಿದರು. ಇನ್ನೊಂದು ಗೋಲನ್ನು 24ನೇ ನಿಮಿಷದಲ್ಲಿ ಮೆಂಫಿಸ್ ಡಿಪೇ ದಾಖಲಿಸಿದರು.

‘ಸಿ’ ಗುಂಪಿನಲ್ಲಿ ನೆದರ್ಲೆಂಡ್ಸ್ ಈಗಾಗಲೇ ಅಗ್ರಸ್ಥಾನದಲ್ಲಿದೆ. ಈ ಸೋಲಿನೊಂದಿಗೆ ನಾರ್ತ್ ಮೆಸಿಡೋನಿಯಾ ಟೂರ್ನಿಯಿಂದ ಹೊರಬಿದ್ದಿದೆ.

‘ಬಿ’ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್‌ 4–1ರಿಂದ ರಷ್ಯಾವನ್ನು ಮಣಿಸಿತು. ಡೆನ್ಮಾರ್ಕ್‌ ಪರ ಮಿಕ್ಕೆಲ್ ಡ್ಯಾಮ್ಸ್‌ಗಾರ್ಡ್‌ (38ನೇ ನಿಮಿಷ), ಯೂಸುಫ್ ಪೌಲ್‌ಸನ್‌ (59ನೇ ನಿ.), ಆ್ಯಂಡ್ರಿಯಾಸ್‌ ಕ್ರಿಸ್ಟೆನ್ಸನ್‌ (79ನೇ ನಿ.), ಜೋಕಿಮ್ ಮಾಹ್ಲೆ (82ನೇ ನಿ.) ಗೋಲು ದಾಖಲಿಸಿದರು.

ರಷ್ಯಾದ ಆರ್ಟೆಮ್ ಡಿಜುಬಾ 70ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿಸಿದರು.

ಬಿ ಗುಂಪಿನ ಇನ್ನೊಂದು ಹಣಾಹಣಿಯಲ್ಲಿ ಬೆಲ್ಜಿಯಂ 2–0ಯಿಂದ ಫಿನ್‌ಲೆಂಡ್ ತಂಡವನ್ನು ಸೋಲಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು