4

ನೇಮರ್ ಸಹೋದರಿ ಭುಜದ ಮೂಳೆ ಮುರಿದುಕೊಂಡಾಗ

Published:
Updated:

ರಿಯೊ ಡಿ ಜನೈರೊ (ಎಎಫ್‌ಪಿ): ಬ್ರೆಜಿಲ್ ತಂಡದ  ಆಟಗಾರ ನೇಮರ್ ಈಚೆಗೆ ಕೋಸ್ಟರಿಕಾ ವಿರುದ್ಧದ ಪಂದ್ಯದಲ್ಲಿ ಗೋಲು ಹೊಡೆದಿದ್ದರು. ಅದರೊಂದಿಗೆ ಬ್ರೆಜಿಲ್ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದರು. ಅವರು ಭಾವುಕರಾಗಿ ಆನಂದಭಾಷ್ಪ ಸುರಿಸಿದ್ದೂ ಆಯಿತು.

ಅದೇ ಸಮಯದಲ್ಲಿ ಇತ್ತ ರಿಯೊದಲ್ಲಿದ್ದ ಅವರ ಸಹೋದರಿ ಸಂಭ್ರಮದಲ್ಲಿ ಮೈಮರೆತು ಭುಜದ ಮೂಳೆ ಮುರಿದುಕೊಂಡ ಘಟನೆಯೂ ನಡೆಯಿತು.

ನೇಮರ್ ಅವರ ಸಹೋದರಿ ರಫೆಲಾ ಸ್ಯಾಂಟೋಸ್ ಅವರು ಟಿ.ವಿ.ಯಲ್ಲಿ ಬ್ರೆಜಿಲ್ ಪಂದ್ಯವನ್ನು ವೀಕ್ಷಿಸಿದ್ದರು.  ನೇಮರ್ ಗೋಲು ಹೊಡೆದಾಗ ತಮ್ಮ ಸ್ನೇಹಿತರೊಂದಿಗೆ ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ಗಾಯಗೊಂಡರು ಎಂದು ಸ್ಪೋರ್‌ಟಿವಿ ವಾಹಿನಿಯು ವರದಿ ಮಾಡಿದೆ.

ರಫೇಲಾ ಅವರು ತಮ್ಮ ಎಡಭುಜ ಮತ್ತು ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !