ಭಾನುವಾರ, ಮೇ 22, 2022
21 °C
ಬಿಡಿಎಫ್‌ಎ ಫುಟ್‌ಬಾಲ್ ಟೂರ್ನಿ: ಕಿಕ್‌ಸ್ಟಾರ್ಟ್‌ ಎಫ್‌ಸಿಗೆ ಭರ್ಜರಿ ಜಯ

ನಿಖಿಲ್‌ ರಾಜ್ ಹ್ಯಾಟ್ರಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಂ.ನಿಖಿಲ್ ರಾಜ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಕಿಕ್‌ಸ್ಟಾರ್ಟ್ ಎಫ್‌ಸಿ ತಂಡವಿ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಈಗಲ್ಸ್ ಎಫ್‌ಸಿ ತಂಡವನ್ನು ಮಣಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್ ತಂಡಕ್ಕೆ 5–0 ಗೋಲುಗಳ ಜಯ ಒಲಿಯಿತು.

ನಿಖಿಲ್‌ ರಾಜ್‌ 73, 90+3 ಹಾಗೂ 90+5ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಕಿಕ್‌ಸ್ಟಾರ್ಟ್ ತಂಡದ ಸುಧೀರ್ ಕೋಟಿಕೇಲ (55ನೇ ನಿಮಿಷ) ಹಾಗೂ ಉಜೋಚಿ ಇಮ್ಯಾನ್ನುಯೆಲ್‌ (56ನೇ ನಿಮಿಷ) ತಲಾ ಒಂದು ಗೋಲು ಹೊಡೆದರು.

ಗುರುವಾರ ನಡೆಯುವ ಪಂದ್ಯಗಳಲ್ಲಿ ಎಫ್‌ಸಿ ಡೆಕ್ಕನ್‌–ಸ್ಟೂಡೆಂಟ್ಸ್ ಯೂನಿಯನ್‌ ಎಫ್‌ಸಿ ಹಾಗೂ ಯಂಗ್ ಚಾಲೆಂಜರ್ಸ್‌ ಎಫ್‌ಸಿ–ಎಡಿಇ ಎಫ್‌ಸಿ ಮುಖಾಮಖಿಯಾಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು