ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್: ತಪ್ಪಿದ ಒಡಿಶಾ ಸೋಲು

Last Updated 22 ಡಿಸೆಂಬರ್ 2020, 17:58 IST
ಅಕ್ಷರ ಗಾತ್ರ

ಗೋವಾ: ಕೋಲ್ ಅಲೆಕ್ಸಾಂಡರ್‌ ಗಳಿಸಿದ ಗೋಲು ಒಡಿಶಾ ಎಫ್‌ಸಿ ತಂಡದ ಸೋಲು ತಪ್ಪಿಸಿತು.

ಜಿಎಂಸಿ ಮೈದಾನದಲ್ಲಿ ಮಂಗಳವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯಲ್ಲಿ ಒಡಿಶಾ ಎಫ್‌ಸಿ ಮತ್ತು ನಾರ್ತ್‌ ಈಸ್ಟ್‌ ಯುನೈಟೆಡ್ ನಡುವಣ ಪಂದ್ಯವು 2–2ರಿಂದ ಡ್ರಾ ಆಯಿತು.

ಪಂದ್ಯದ 22ನೇ ನಿಮಿಷದಲ್ಲಿ ಒಡಿಶಾದ ಡಿಯೆಗೊ ಮೊರಷೊ ಗೋಲು ಗಳಿಸಿದರು. ಆದರೆ ನಾರ್ತ್‌ ಈಸ್ಟ್ ತಂಡದ ಬೆಂಜಮಿನ್ ಲಾಂಬೋಲ್ (45+2ನಿ) ಗೋಲು ಹೊಡೆದು ಸಮಬಲ ಸಾಧಿಸಿದರು. 65ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯನ್ನು ಗೋಲಿನಲ್ಲಿ ಪರಿವರ್ತಿಸಿದ ಕ್ವೇಸಿ ಅಫಾ ನಾರ್ತ್‌ ಈಸ್ಟ್ ತಂಡಕ್ಕೆ 2–1 ಮುನ್ನಡೆ ಒದಗಿಸಿದರು. ಆದರೆ ಎರಡು ನಿಮಿಷಗಳ ನಂತರ ಗೋಲು ಹೊಡೆದ ಕೋಲ್ ಒಡಿಶಾ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

ಬುಧವಾರ ನಡೆಯುವ ಪಂದ್ಯದಲ್ಲಿ ಎಫ್‌ಸಿ ಗೋವಾ ಹಾಗೂ ಜಮ್ಶೆಡ್‌ಪುರ ಎಫ್‌ಸಿ ತಂಡಗಳು ಸೆಣಸಲಿವೆ. ವಾಸ್ಕೊದಲ್ಲಿ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT