ಮನೆಗೆ ಮರಳಿದ ಪೆಲೆ

ಶುಕ್ರವಾರ, ಏಪ್ರಿಲ್ 26, 2019
21 °C

ಮನೆಗೆ ಮರಳಿದ ಪೆಲೆ

Published:
Updated:
Prajavani

ಪ್ಯಾರಿಸ್‌: ಮೂತ್ರದ ಸೋಂಕಿನ ಕಾರಣ ಇಲ್ಲಿನ ಅಮೆರಿಕನ್‌ ಆಸ್ಪತ್ರೆಗೆ ದಾಖಲಾಗಿದ್ದ ಬ್ರೆಜಿಲ್‌ನ ಫುಟ್‌ಬಾಲ್‌ ದಂತಕತೆ ಪೆಲೆ, ಸಂಪೂರ್ಣವಾಗಿ ಗುಣಮುಖರಾಗಿದ್ದು ಮಂಗಳವಾರ ಮನೆಗೆ ಮರಳಿದ್ದಾರೆ.

ಪೆಲೆಗೆ ಆರು ದಿನಗಳ ಕಾಲ ವಿಶೇಷ ಚಿಕಿತ್ಸೆ ನೀಡಲಾಗಿತ್ತು. ಅದಕ್ಕೆ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರು.

ಬ್ರೆಜಿಲ್‌ನ ಆಟಗಾರ ನೇಮರ್‌, ಸೋಮವಾರ, 78ರ ಹರೆಯದ ಪೆಲೆ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಭೇಟಿಯ ಚಿತ್ರವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು.

ಪೆಲೆ ಅವರು ಸೋಮವಾರವೇ ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಹೆಚ್ಚಿನ ಚಿಕಿತ್ಸೆಯ ಕಾರಣ ವೈದ್ಯರು ಅವರನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡಿದ್ದರು.

‘ಆಸ್ಪತ್ರೆಯಲ್ಲಿ ಇದ್ದಷ್ಟು ಸಮಯ ಚೆನ್ನಾಗಿ ಆರೈಕೆ ಮಾಡಿದ ವೈದ್ಯರು ಮತ್ತು ಸಿಬ್ಬಂದಿಗೆ ಆಭಾರಿಯಾಗಿದ್ದೇನೆ’ ಎಂದು ಪೆಲೆ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !