ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಚೆನ್ನಾಗಿದ್ದೇನೆ; ಪೆಲೆ

Last Updated 4 ಡಿಸೆಂಬರ್ 2022, 18:05 IST
ಅಕ್ಷರ ಗಾತ್ರ

ಸಾವೊಪೌಲೊ (ಎಎಫ್‌ಪಿ): ‘ನಾನು ಚೆನ್ನಾಗಿದ್ದೇನೆ. ಬಹಳಷ್ಟು ನಿರೀಕ್ಷೆಗಳೊಂದಿಗಿರುವೆ’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಫುಟ್‌ಬಾಲ್ ದಿಗ್ಗಜ ಪೆಲೆ ಹೇಳಿದ್ದಾರೆ.

ಬ್ರೆಜಿಲ್‌ ದೇಶದ ಫುಟ್‌ಬಾಲ್ ದಂತಕಥೆ ಪೆಲೆ ಅವರು ಕರುಳಿನ ಕ್ಯಾನ್ಸ್‌ರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಈಚೆಗೆ ಇಲ್ಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. 82 ವರ್ಷದ ಪೆಲೆ ಅವರು ಕಿಮೊಥೆರಪಿಗೆ ಸ್ಪಂದಿಸುತ್ತಿಲ್ಲ ಎಂದು ವರದಿಯಾಗಿತ್ತು.

ಇದೀಗ ಸ್ವತಃ ಅವರೇ ಪ್ರತಿಕ್ರಿಯಿಸಿದ್ದಾರೆ.

‘ನನ್ನ ಮಿತ್ರರೇ, ಎಲ್ಲರೂ ಸಕಾರಾತ್ಮಕವಾಗಿ ಹಾಗೂ ಶಾಂತಚಿತ್ತರಾಗಿ ಇರಿ. ನಾನು ಚೆನ್ನಾಗಿದ್ದೇನೆ. ಬಹಳಷ್ಟು ನಿರೀಕ್ಷೆಗಳೊಂದಿಗೆ ಇದ್ದೇನೆ. ನನ್ನ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT