ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಫ್ರ್ಯಾಂಚೈಸಿಯು ಸ್ಪೇನ್ನ ಪೆಪ್ ಮುನೋಝ್ ಅವರನ್ನು ತಂಡದ ಮುಖ್ಯಕೋಚ್ ಆಗಿ ನೇಮಕ ಮಾಡಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕೃತವಾಗಿ ಘೋಷಿಸಲಿದೆ ಎಂದು ವರದಿಯಾಗಿದೆ.

ಬಾರ್ಸಿಲೋನಾ ಫುಟ್ಬಾಲ್ ಅಕಾಡೆಮಿಯಲ್ಲಿ ಕೋಚ್ ಆಗಿರುವ 46 ವರ್ಷ ವಯಸ್ಸಿನ ಮುನೋಝ್ ಅವರು ಏ.4ರಂದು ಎಫ್ಸಿ ಗೋವಾ ವಿರುದ್ಧದ ಪಂದ್ಯಕ್ಕೂ ಮೊದಲು ತಂಡವನ್ನು ಸೇರಿಕೊಳ್ಳಲಿದ್ದಾರೆ.

ಈ ಹಿಂದೆ ಮುಖ್ಯಕೋಚ್ ಆಗಿದ್ದ ಜೆರಾರ್ಡ್ ಝಾರ್ಗೋಝಾ ಅವರು 2025ರ ನವೆಂಬರ್ನಲ್ಲಿ ರಾಜೀನಾಮೆ ನೀಡಿದ್ದರು. ಹೀಗಾಗಿ, ಮ್ಯಾನೇಜರ್ ರೆನೆಡಿ ಸಿಂಗ್ ಅವರೇ ಕೋಚ್ ಹೊಣೆಯನ್ನೂ ಹೊತ್ತಿದ್ದರು.

‘ರೆನೆಡಿ ಅವರು ಮ್ಯಾನೇಜರ್ ಆಗಿ ಮುಂದುವರಿಯ ಲಿದ್ದಾರೆ. ದೀರ್ಘಾವಧಿಗೆ ತಂಡವನ್ನು ಕಟ್ಟುವ ಉದ್ದೇಶದಿಂದ ಮುನೋಝ್ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಬಿಎಫ್ಸಿಯ
ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.